ನವದೆಹಲಿ :"ದೇಶದಲ್ಲಿ ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ನಂಬುವುದಿಲ್ಲ, ಎರಡನೇ ರಂಗದಿಂದ ಮಾತ್ರ ಬಿಜೆಪಿಯನ್ನು ಸೋಲಿಸಲು ಸಾಧ್ಯ''ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ನವದೆಹಲಿ :"ದೇಶದಲ್ಲಿ ಯಾವುದೇ ಮೂರನೇ ಅಥವಾ ನಾಲ್ಕನೇ ರಂಗವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ನಂಬುವುದಿಲ್ಲ, ಎರಡನೇ ರಂಗದಿಂದ ಮಾತ್ರ ಬಿಜೆಪಿಯನ್ನು ಸೋಲಿಸಲು ಸಾಧ್ಯ''ಎಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
2024ರ ಸಾರ್ವತ್ರಿಕ ಚುನಾವಣೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಪಕ್ಷ ಟಿಎಂಸಿಗೆ ಮೂರನೇ ರಂಗವಾಗಿ ಹೊರಹೊಮ್ಮಲು ನೀವು ಸಹಾಯ ಮಾಡುತ್ತಿದ್ದೀರಾ?
"ಈ ದೇಶದಲ್ಲಿ ಯಾವುದೇ ತೃತೀಯ ಅಥವಾ ನಾಲ್ಕನೇ ರಂಗವು ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ನಾನು ಎಂದಿಗೂ ನಂಬಿಲ್ಲ. ನಾವು ಬಿಜೆಪಿಯನ್ನು ಮೊದಲ ರಂಗವೆಂದು ಪರಿಗಣಿಸಿದರೆ, ಆ ಪಕ್ಷವನ್ನು ಸೋಲಿಸಲು ಅದು ಎರಡನೇ ರಂಗವಾಗಿರಬೇಕು. ಯಾವುದೇ ಪಕ್ಷವು ಬಿಜೆಪಿಯನ್ನು ಸೋಲಿಸಲು ಬಯಸಿದರೆ, ಅದು ಎರಡನೇ ರಂಗವಾಗಿ ಹೊರಹೊಮ್ಮುತ್ತದೆ"ಎಂದರು.
ನೀವು ಕಾಂಗ್ರೆಸ್ ಅನ್ನು ಎರಡನೇ ರಂಗವೆಂದು ಪರಿಗಣಿಸುತ್ತೀರಾ ಎಂದು ಅವರನ್ನು ಕೇಳಿದಾಗ, 'ಇಲ್ಲ' ಎಂದು ಹೇಳಿದ ಕಿಶೋರ್, ''ಕಾಂಗ್ರೆಸ್ ದೇಶದ ಎರಡನೇ ದೊಡ್ಡ ಪಕ್ಷವಾಗಿದೆ''ಎಂದು ಹೇಳಿದರು.