HEALTH TIPS

ಮಾಯಿಪ್ಪಾಡಿಯಲ್ಲಿ ಸಾಮಾಜಿಕ ಸಂಪರ್ಕ, ಸಹವಾಸ ಶಿಬಿರ

               ಕುಂಬಳೆ: ಸಾಟಿಯಿಲ್ಲದ,  ಮನಸೂರೆಗೊಳ್ಳುವ ಕಲೆ ಯಕ್ಷಗಾನ. ನಾಟ್ಯ, ನಾದ, ಭಾವ ಲಾಸ್ಯಗಳ ಜತೆ ನಿರರ್ಗಳವಾದ ಮಾತುಗಾರಿಕೆಯೂ ಸೇರಿ ಅಚ್ಚಗನ್ನಡದ ಕಂಪನ್ನು ಸಾರುವ ಕಲೆ. ಜನಮನದಲ್ಲಿ ಎಂದೆಂದೂ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ. ನಾಜೂಕಾದ ಬಣ್ಣಗಾರಿಕೆಯೊಂದಿಗೆ ಆಕರ್ಷಕವಾದ ವಸ್ತ್ರವಿನ್ಯಾಸಗಳ ಮೂಲಕ   ಪಾತ್ರಗಳಿಗೆ ಕಲಾವಿದರು ಜೀವ ತುಂಬುವ ರೀತಿ ನೋಡುಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ ಎಂದು  ಯಕ್ಷಗಾನ ಗುರು, ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿ ಪುರಸ್ಕøತ ಯಕ್ಷಗುರು ಜಯರಾಮ ಪಾಟಾಳಿ ಪಡುಮಲೆ ಹೇಳಿದರು.

               ಅವರು ಡಯಟ್ ಮಾಯಿಪ್ಪಾಡಿಯಲ್ಲಿ ಡಿ.ಎಲ್.ಎಸ್ ಪಾಠಪದ್ದತಿಯ ಭಾಗವಾಗಿ  ನಡೆದ ಸಾಮಾಜಿಕ ಸಂಪರ್ಕ ಸಹವಾಸ ಶಿಬಿರ ಡ್ರಿಸ್ಲ್ ನ ಶಿಬಿರಾರ್ಥಿಗಳಿಗೆ ಯಕ್ಷಗಾನ ಬಣ್ಣಗಾರಿಕೆ ಹಾಗೂ ವೇಷಭೂಷಣದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು. 


            ವೇಷಗಳಿಗನುಸಾರವಾಗಿ ಬಣ್ಣದಲ್ಲಿ ಹಾಗೂ ವೇಷಭೂಷಣದಲ್ಲಾಗುವ ಬದಲಾವಣೆಗಳ ಬಗ್ಗೆ ಸವಿವರ ಮಾಹಿತಿ ನೀಡುತ್ತಾ ಚೌಕಿ ಮತ್ತು ರಂಗಸ್ಥಳದ ಬಗೆಗೆ ಕುತೂಹಲಕಾರಿ ವಿಚಾರಗಳನ್ನು ವಿವರಿಸಿ ಶಿಬಿರಾರ್ಥಿಗಳ ಕುತೂಹಲ ಹೆಚ್ಚಿಸಿದರು.

            ಸ್ತ್ರೀ ವೇಷ, ಪುಂಡು ವೇಷ, ಕಿರೀಟ ವೇಷಗಳ ಮುಖವರ್ಣಿಕೆ ಹಾಗೂ ವೇಷ ಭೂಷಣಗಳನ್ನು ಪ್ರಾತ್ಯಕ್ಷಿಕೆಯಲ್ಲಿ ಅಳವಡಿಸಲಾಗಿತ್ತು.

ಕೇರಳ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆಗೂ ಸ್ಥಾನ ದೊರೆಯಲು ಕಾರಣರಾದವರಲ್ಲಿ ಪಡುಮಲೆಯವರೂ ಒಬ್ಬರು. ಕೇರಳದ ಎಲ್ಲಾ ಜಿಲ್ಲೆಗಳಲ್ಲಿಯೂ ಗುರುವಾಗಿ ಗಂಡುಕಲೆ ಯಕ್ಷಗಾನ ಹಾಗೂ  ಕನ್ನಡದ ಕಂಪ ಪಸರಿಸಿದ ಪಡುಮಲೆಯವರಿಗೆ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ ಹಾಗೂ ಮನೆ ಮನೆಯಲ್ಲಿ ಯಕ್ಷಗಾನದ ರೂವಾರಿ ಅಖಿಲೇಶ್ ನಗುಮುಗಂ,  ಪಡುಮಲೆಯವರ ಶಿಷ್ಯರಾದ ಯತಿಕ, ಪ್ರಶಾಂತ್, ಸಾನಿಧ್ಯ ಪ್ರಾತ್ಯಕ್ಷಿಕೆಗೆ ಸಹಕಾರ ನೀಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries