HEALTH TIPS

ಕಾಡು ಹಂದಿ ಸೆರೆಗೆ ರಾತ್ರಿ ವಿದ್ಯುತ್​ ತಂತಿ ಅಳವಡಿಸಿ ನಿದ್ದೆಗೆ ಜಾರಿದವನಿಗೆ ಮಧ್ಯರಾತ್ರಿ ಕಾದಿತ್ತು ಶಾಕ್​!

                   ಪಾಲಕ್ಕಾಡ್​: ಕಾಡು ಹಂದಿ ಹಿಡಿಯಲು ಅಳವಡಿಸಿದ್ದ ವಿದ್ಯುತ್​ ತಂತಿಯ ಬಲೆಗೆ ಸಿಲುಕಿ ವಿದ್ಯುತ್​ ಶಾಕ್​ನಿಂದ ಪೊಲೀಸ್​ ಪೇದೆ ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

                ಮೃತರನ್ನು ಅಶೋಕನ್​ ಮತ್ತು ಮೋಹನ್​ ದಾಸ್​ ಎಂದು ಗುರುತಿಸಲಾಗಿದೆ.

            ಇಬ್ಬರು ಮುತ್ತಿಕುಲಂಗರ ಕೆಎಪಿ-2 ಬೆಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಕ್ರಮವಾಗಿ ವಿದ್ಯುತ್​ ತಂತಿಯ ಬಲೆ ಅಳವಡಿಸಿ ಪೇದೆಗಳು ಸಾವಿಗೆ ಕಾರಣವಾದ ಆರೋಪದ ಮೇಲೆ ಮುತ್ತಿಕುಲಂಗರ ನಿವಾಸಿ ಸುರೇಶ್​ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಕಾಡು ಹಂದಿ ಹಿಡಿದಿರುವ ಅನೇಕ ಪ್ರಕರಗಳನ್ನು ಈ ಹಿಂದೆಯೂ ಈತನ ವಿರುದ್ಧ ಅರಣ್ಯ ಇಲಾಖೆಯಲ್ಲಿ ದಾಖಲಾಗಿದೆ.

             ಮೋಹನ್​ ದಾಸ್​ ಮತ್ತು ಅಶೋಕನ್​, ಮೃತ ಪೇದೆಗಳು ಆರೋಪಿ ತಪ್ಪೊಪ್ಪಿಕೊಂಡಿದ್ದು, ತಾನು ಅವಳವಡಿಸಿದ್ದ ವಿದ್ಯುತ್​ ತಂತಿಯ ಬಲೆಗೆ ಸಿಲುಕಿ ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾನೆ. ರಾತ್ರಿ 10ರ ಸುಮಾರಿಗೆ ತನ್ನ ಮನೆಯ ಕಾಪೌಂಡ್​ ಗೋಡೆಯ ಹೊರಗೆ ಅಳವಡಿಸಿದ್ದ ವಿದ್ಯುತ್ ತಂತಿಯ ಬಲೆಯ ವಿದ್ಯುತ್​ ಸಂಪರ್ಕವನ್ನು ಸ್ವಿಚ್​ ಆನ್ ಮಾಡಿ ಮಲಗಿದ್ದ.

              ಆರೋಪಿ ಸುರೇಶ್​ಗೆ ಮಧ್ಯರಾತ್ರಿ ಎಚ್ಚರವಾದಾಗ ಪೊಲೀಸರಿಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಇಬ್ಬರು ಮೃತಪಟ್ಟಿರುವುದು ಗೊತ್ತಾದ ಕೂಡಲೇ ಎಳೆಯುವ ಗಾಡಿಯಲ್ಲಿ ಇಬ್ಬರ ಶವಗಳನ್ನು ಹಾಕಿಕೊಂಡು ಹೋಗಿ ಗದ್ದೆಗೆ ಎಸೆದು ಬಂದಿದ್ದ. ಗುರುವಾರ ಬೆಳಗ್ಗೆ 9 ಗಂಟೆಗೆ ಪೊಲೀಸ್​ ಕ್ಯಾಂಪ್​ ಹತ್ತಿರದ ಭತ್ತದ ಗದ್ದೆಯಲ್ಲಿ ಅಶೋಕನ್​ ಮತ್ತು ಮೋಹನ್​ ದಾಸ್​ ಮೃತದೇಹ ಪತ್ತೆಯಾಗಿತ್ತು.

                ಬುಧವಾರ ರಾತ್ರಿಯಿಂದಲೇ ಇಬ್ಬರು ನಾಪತ್ತೆಯಾಗಿದ್ದರು. ಹೆಚ್ಚಿನ ಭದ್ರತೆ ಇರುವ ಪೊಲೀಸ್​ ಶಿಬಿರದಿಂದ ಅವರಿಬ್ಬರು ಹೇಗೆ ಹೊರಗೆ ಹೋದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಮೃತದೇಹಗಳು ಪರಸ್ಪರ ಸುಮಾರು 60 ಮೀಟರ್ ದೂರದಲ್ಲಿ ಬಿದ್ದಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸುರೇಶ್​ ಕೃತ್ಯ ಬಯಲಾಗಿದೆ.

ಯಾರಿಗೂ ವಿಚಾರ ಗೊತ್ತಾಗಬಾರದೆಂದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಆರೋಪಿ ಸುರೇಶ್​ ಘಟನೆಯ ಬೆನ್ನಲ್ಲೇ ವಿದ್ಯುತ್​ ತಂತಿಯ ಬಲೆಯನ್ನು ಕಿತ್ತೆಸೆದಿದ್ದ. ಆದರೆ, ಪೊಲೀಸ್​ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದು ಸುರೇಶ್​ ವಿಚಾರಣೆ ನಡೆಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries