ಕೋಝಿಕ್ಕೋಡ್: ನಟಿ ಹಾಗೂ ರೂಪದರ್ಶಿ ಶಹಾನಾ ಅವರ ಪತಿ ಸಜ್ಜದ್ ಅವರನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ. ಅವರನ್ನು ಆತ್ಮಹತ್ಯಾ ಪ್ರೇರಣೆ ಆರೋಪದ ಮೇಲೆ ಬಂಧಿಸಲಾಗಿದೆ. ಸಜ್ಜದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಶಹಾನಾ ಕೊಲೆ ಆತ್ಮಹತ್ಯೆಯಲ್ಲ ಎಂದು ಕುಟುಂಬದವರು ಆರೋಪಿಸಿದ್ದರು. ಶಹಾನಾ ಅವರ ತಾಯಿ ಮತ್ತು ಸಹೋದರ ಸಜ್ಜದ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೋಝಿಕ್ಕೋಡ್ ಪರಂಪಿಲ್ ಬಜಾರ್‍ನ ಬಾಡಿಗೆ ಮನೆಯಲ್ಲಿ ಶಹಾನಾ ಶವವಾಗಿ ಪತ್ತೆಯಾಗಿದ್ದಳು.
ಶಹಾನಾ ಕಾಸರಗೋಡು ಮೂಲದವರು. ಘಟನೆಯಲ್ಲಿ ಆಕೆಯ ಪತಿ ಸಜ್ಜದ್ ನನ್ನು ಪೋಲೀಸರು ವಶಕ್ಕೆ ಪಡೆದಿದ್ದರು. ಶಹಾನಾ ಅವರನ್ನು ಸಜ್ಜದ್ ಕೊಂದಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ ಹಿನ್ನೆಲೆಯಲ್ಲಿ ಸಜ್ಜದ್ ನನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಪೋಲೀಸರಿಗೆ ಸಜ್ಜದ್ ಕೋಣೆಯಲ್ಲಿ ಗಾಂಜಾ ಪತ್ತೆಯಾಗಿದೆ. ವಿಚಾರಣೆ ವೇಳೆ ಸಜ್ಜದ್ ನಿಯಮಿತವಾಗಿ ಡ್ರಗ್ಸ್ ಬಳಸುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಪೋಲೀಸರು ತಿಳಿಸಿದ್ದಾರೆ.
ಸಜ್ಜದ್ ತನ್ನ ಮಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದ್ದ ಎಂದು ಶಹಾನಾ ತಾಯಿ ಉಮೈಬಾ ಹೇಳಿದ್ದರು. ಸಜ್ಜದ್ ಆಗಾಗ ಕರೆ ಮಾಡಿ ಕಿರುಕುಳ ನೀಡುತ್ತಿರುವುದಾಗಿ ಹೇಳುತ್ತಿದ್ದಳು. "ನಿಮ್ಮ ಮೋಳನ್ನು ಕೊಂದು ಕಳುಹಿಸಲು ಸಜ್ಜದ್ ಹೇಳಿದ್ದಾನೆ" ಎಂದು ಉಮೈಬಾ ಹೇಳಿರುವರು. ಅವರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು. ವಿವಾಹದ ಬಳಿಕ ನಮ್ಮನ್ನೆಲ್ಲ ನೇರವಾಗಿ ಭೇಟಿಯಾಗಲೂ ಕೂಡ ಸಜ್ಜದ್ ಬಿಡುತ್ತಿರಲಿಲ್ಲ ಎಂದು ಶಹಾನಾಳ ತಾಯಿ ಮತ್ತು ಒಡಹುಟ್ಟಿದವರು ಪೋಲೀಸರಿಗೆ ತಿಳಿಸಿದ್ದಾರೆ.