ತಿರುವನಂತಪುರ: ನಿರ್ದೇಶಕ ಸನಲ್‍ಕುಮಾರ್ ಶಶಿಧರನ್ ಲವ್ ಪ್ರಪೆÇೀಸಲ್ ಮಾಡಿದ್ದರು ಎಂದು ನಟಿ ಮಂಜು ವಾರಿಯರ್ ಹೇಳಿದ್ದಾರೆ. ಎಳಮಕ್ಕರ ಪೋಲೀಸರಿಗೆ ನೀಡಿರುವ ದೂರಿನಲ್ಲಿ ನಟಿ ಈ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ನಿರ್ದೇಶಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಮಂಜು ವಾರಿಯರ್ ದೂರಿದ್ದಾರೆ.
ದೂರಿನ ಪ್ರಕಾರ, ಸನಲ್‍ಕುಮಾರ್ 2019 ರಿಂದ ಪ್ರೇಮ ಪ್ರಸ್ತಾಪದ ಮೂಲಕ ಕಿರುಕುಳ ನೀಡಲಾರಂಭಿಸಿದರು. ನಿರ್ದೇಶಕರು ತಮ್ಮ ಪ್ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಫೆÇೀನ್ ಮೂಲಕ ಪ್ರಕಟಿಸಿದ್ದರು. ಆದರೆ ಅದನ್ನು ನಿರಾಕರಿಸಿದಾಗ ಕಿರುಕುಳ ಶುರುಹಚ್ಚಿದರು. ಸನಲ್‍ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ದೂರವಾಣಿ ಮೂಲಕ ಕಿರುಕುಳ ನೀಡಿದ್ದರು. ಇದಲ್ಲದೇ ಕೆಲವು ಬಂಧು ಮಿತ್ರರ ಬಳಿ ಈ ಬಗ್ಗೆ ಹೇಳಿಕೊಂಡು ಮುಜುಗರಕ್ಕೆ ಕಾರಣರಾಗಿದ್ದರು ಎಂದು ಮಂಜು ದೂರಿನಲ್ಲಿ ತಿಳಿಸಿದ್ದಾರೆ.
ಸನಲ್‍ಕುಮಾರ್ ಅಭಿನಯದ ಕಯ್ಯಾಟ್ಟಂ ಚಿತ್ರದಲ್ಲಿ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ದೂರಿನ ಪ್ರಕಾರ, ಚಿತ್ರದ ಶೂಟಿಂಗ್ ಮುಗಿದ ನಂತರ ಸಮಸ್ಯೆಗಳು ಪ್ರಾರಂಭವಾಗಿವೆ. ಮಂಜು ಅವರ ದೂರಿನನ್ವಯ ಬೆದರಿಕೆ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.