ಆಲಪ್ಪುಳ: ಸಂಘ ಶಕ್ತಿಗೆ ಕರೆ ನೀಡಿ ಆಲಪ್ಪುಳದಲ್ಲಿ ಬಜರಂಗದಳ ನಿನ್ನೆ ಆಯೋಜಿಸಿದ ರ್ಯಾಲಿ ಗಮನ ಸೆಳೆಯಿತು. ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಕಾನೂನು ಸುವ್ಯವಸ್ಥೆಗೆ ಸವಾಲೊಡ್ಡುವ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ನೇತೃತ್ವದಲ್ಲಿ ನಿನ್ನೆ ಆಲಪ್ಪುಳ ಜಿಲ್ಲೆಯಲ್ಲಿ ರ್ಯಾಲಿ ಆಯೋಜಿಸಲಾಗಿತ್ತು. ಇದನ್ನು ವಿರೋಧಿಸಿ ಭಜರಂಗದಳ ಶೌರ್ಯ ರ್ಯಾಲಿ ಹಮ್ಮಿಕೊಂಡಿತ್ತು.
ಭಜರಂಗದಳ ನೇತೃತ್ವದ ಶೌರ್ಯ ರ್ಯಾಲಿಯಲ್ಲಿ ಧಾರ್ಮಿಕ ಉಗ್ರಗಾಮಿಗಳು ಮತ್ತು ದೇಶ ವಿರೋಧಿ ಶಕ್ತಿಗಳ ಮುಂದೆ ಮಂಡಿಯೂರೆವು ಎಂಬ ಸಂದೇಶ ನೀಡಿತು. ದ್ವಿಚಕ್ರ ವಾಹನ ರ್ಯಾಲಿಯಲ್ಲಿ ಸಾವಿರಾರು ಬಜರಂಗದಳ ಕಾರ್ಯಕರ್ತರು ಪಾಲ್ಗೊಂಡಿದ್ದರು. ರ್ಯಾಲಿಯು ಆಲಪ್ಪುಳ ಎಸ್‍ಡಿವಿ ಶಾಲಾ ಮೈದಾನದಿಂದ ಪ್ರಾರಂಭವಾಯಿತು. ಎಸ್ ಡಿಪಿಐನ ಭದ್ರಕೋಟೆಯಾದ ಮನ್ನಂಚೇರಿ ತಲುಪಿದ ರ್ಯಾಲಿ ಎಸ್ ಡಿವಿ ಶಾಲಾ ಮೈದಾನದಲ್ಲಿ ಸಮಾಪ್ತಿಗೊಂಡಿತು. ವಿವಿಧ ಸಂಘಪರಿವಾರದ ಸಂಘಟನೆಗಳ ಮುಖಂಡರು ರ್ಯಾಲಿಗೆ ಚಾಲನೆ ನೀಡಿದರು.
ಬಿಗಿ ಪೋಲೀಸ್ ಭದ್ರತೆಯಲ್ಲಿ ರ್ಯಾಲಿ ನಡೆಯಿತು. ರ್ಯಾಲಿ ನಡೆಯುವ ಪ್ರದೇಶಗಳಲ್ಲಿ ಪೋಲೀಸರು ಬಿಗು ಭದ್ರತೆಯನ್ನು ಸಿದ್ಧಪಡಿಸಿದ್ದರು.