ಕಾಸರಗೋಡು: ಕುಟುಂಬಶ್ರೀ ವತಿಯಿಂದ ನಿರ್ಮಾಣಗೊಳ್ಳುತ್ತಿರುವ 'ಕೆ ಶ್ರೀ'ಐಸ್‍ಕ್ರೀಂ ಇನ್ನು ಮುಂದೆ ಕಾಸರಗೋಡು ಜಿಲ್ಲೆಯಲ್ಲೂ ಲಭ್ಯವಾಗಲಿದೆ. ಮೈ ಕೇರಳ ವಸ್ತು ಪ್ರದರ್ಶನ ಮತ್ತು ಮಾರುಕಟ್ಟೆ ಮೇಳದಲ್ಲಿ ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ 'ಕೆ ಶ್ರೀ ಐಸ್‍ಕ್ರೀಂ' ಉದ್ಘಾಟಿಸಿದರು.
ಇತರ ಜಿಲ್ಲೆಗಳಲ್ಲಿ ಕೆಶ್ರೀ ಕುಟುಂಬಶ್ರೀ ಉತ್ಪನ್ನ ಉತ್ತಮ ಮಾರುಕಟ್ಟೆ ಹೊಂದಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಐಸ್‍ಕ್ರೀಂ ಮಾರುಕಟ್ಟೆಗೆ ಆಘಮಿಸಿದೆ. ಸುಮಾರು 1.30 ಲಕ್ಷ ರೂಪಾಯಿ ಮೌಲ್ಯದ ಯಂತ್ರ ಬಳಸಿ ಐಸ್ ಕ್ರೀಮ್ ತಯಾರಿಸಲಾಗುತ್ತಿದ್ದು, ಒಂದು ಐಸ್ ಕ್ರೀಮ್ ಬೆಲೆ 30 ರೂಪಾಯಿ ನಿಗದಿಪಡಿಸಲಾಗಿದೆ. ವೆನಿಲ್ಲಾ, ಸ್ಟ್ರಾಬೆರಿ ಇತ್ಯಾದಿ ಎಲ್ಲಾ ಫ್ಲೇವರ್‍ಗಳಲ್ಲಿ ಐಸ್ ಕ್ರೀಮ್ ಲಭ್ಯವಿದೆ. ಕುಟುಂಬಶಿ ಜಿಲ್ಲಾ ಸಂಯೋಜಕ ಟಿ.ಟಿ.ಸುರೇಂದ್ರನ್, ಕುಟುಂಬಶಿ ಸಹಾಯಕ. ಸಂಯೋಜಕ ಡಿ ಹರಿದಾಸ್, ಕಾರ್ಯಕ್ರಮ ಸಂಯೋಜಕ ಬಿಸ್ವಾಸ್ ಉಪಸ್ಥಿತರಿದ್ದರು.