ಅನ್ನ ಮಾಡುವಾಗ ಹಾಗೆ ಸುಮ್ಮನೆ ಬಾಯಿಗೆ ಸ್ವಲ್ಪ ಅಕ್ಕಿ ಹಾಕಿಕೊಳ್ಳುವ ಅಭ್ಯಾಸ ಹಲವರಿಗಿದೆ, ಇನ್ನು ಕೆಲವರಿಗೆ ಎಲ್ಲರ ಕಣ್ತಪ್ಪಿಸಿ ಆದರೂ ಆದರೂ ಸರಿ ಅಕ್ಕಿ ತಿನ್ನುವುದೇ ಗೀಳಾಗಿರುತ್ತದೆ. ಇದು ತತ್ ಕ್ಷಣಕ್ಕೆ ಆರೋಗ್ಯಕ್ಕೆ ಅಷ್ಟೇನೂ ಪರಿಣಾಮ ಬೀರದೆ ಇದ್ದರೂ ಈ ಹಸಿ ಅಕ್ಕಿಯನ್ನು ನಿತ್ಯ ಸೇವಿಸಿದರೆ ಖಂಡಿತ ಅನಾರೋಗ್ಯ ಬಾಧಿಸದೇ ಇರದು.
ಅಕ್ಕಿ ವಿವಿಧ ಜೀವಸತ್ವಗಳು ಮತ್ತು ಖನಿಜಗಳ ನಿಧಿಯಾಗಿದೆ. ಇದರಲ್ಲಿ ನಿಯಾಸಿನ್, ವಿಟಮಿನ್ ಡಿ, ಕ್ಯಾಲ್ಸಿಯಂ, ಫೈಬರ್, ಕಬ್ಬಿಣ, ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಮತ್ತೊಂದೆಡೆ, ಬ್ರೌನ್ ರೈಸ್‌ನಲ್ಲಿ ಸಾಕಷ್ಟು ಪ್ರೋಟೀನ್, ಫೈಬರ್ ಮತ್ತು ವಿಟಮಿನ್‌ಗಳು ಕಂಡುಬರುತ್ತವೆ, ಇದು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಆದರೆ ನೆನಪಿರಲಿ ಇನ್ನು ಸರಿಯಾದ ಕ್ರಮದಲ್ಲಿ ಬೇಯಿಸಿ ತಿಂದ ರೆ ಮಾತ್ರ ಈ ಜೀವಸತ್ವಗಳು ನಮ್ಮ ದೇಹ ಸೇರುತ್ತದೆ. ಬದಲಾಗಿ ಹಸಿ ಅಕ್ಕಿಯನ್ನು ಸೇವಿಸುವುದು ದೇಹಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಹಸಿ ಅಕ್ಕಿಯನ್ನು ತಿನ್ನುವುದರಿಂದ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ:ಜೀರ್ಣಾಂಗವ್ಯೂಹ ಮತ್ತು ಜೀರ್ಣಕಾರಿ ಸಮಸ್ಯೆಗಳು ಹಸಿ ಅಕ್ಕಿಯು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಲೆಕ್ಟಿನ್ ಎಂಬ ಪ್ರೊಟೀನ್ ಅಕ್ಕಿಯಲ್ಲಿ ಕಂಡುಬರುತ್ತದೆ. ಇದು ನೈಸರ್ಗಿಕ ಕೀಟನಾಶಕ ಮತ್ತು ಆಂಟಿನ್ಯೂಟ್ರಿಯೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಹಸಿ ಅಕ್ಕಿಯನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.
ಕಲ್ಲಿನ ಸಮಸ್ಯೆ ಅಕ್ಕಿ ತಿನ್ನುವುದು ಮೂತ್ರಜನಕಾಂಗದಲ್ಲಿ ಕಲ್ಲಿನ ರಚನೆಯ ಸಮಸ್ಯೆಯನ್ನು ಎಉರಿಸುತ್ತಾರೆ. ಇದು ಹಾನಿಕಾರಕ ಸಮಸ್ಯೆಯಾಗಿದೆ. ವಾಸ್ತವವಾಗಿ, ಅಕ್ಕಿ ಸೇವನೆಯು ಇಲ್ಲೆ ಇರುವವರಿಗೆ ಕಿಡ್ನಿ ಸಮಸ್ಯೆ ಉಂಟು ಮಾಡಿದರೆ, ಈಗಾಗಲೇ ಕಿಡ್ನಿ ಸಮಸ್ಯೆ ಇರುವವರಿಗೆ ಮಾರಣಾಂತಿಕ ಅಪಾಯವನ್ನು ಹೆಚ್ಚಿಸಬಹುದು.
ಆಹಾರ ವಿಷದ ಸಮಸ್ಯೆ ಹಸಿ ಅಕ್ಕಿ ತಿನ್ನುವುದರಿಂದ ಆಹಾರ ವಿಷವಾಗುತ್ತದೆ. ಅಕ್ಕಿಯಲ್ಲಿ ಬ್ಯಾಸಿಲಸ್ ಸಿರಸ್ ಎಂಬ ಬ್ಯಾಕ್ಟೀರಿಯಾವಿದ್ದು ಇದು ದೇಹದಲ್ಲಿ ಆಹಾರ ವಿಷದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ಹಸಿ ಅಕ್ಕಿ ಸೇವನೆಯನ್ನು ತಪ್ಪಿಸಿ.
ನಿಶ್ಯಕ್ತಿ ಹಸಿ ಅಕ್ಕಿಯನ್ನು ಸೇವಿಸುವುದರಿಂದ, ವ್ಯಕ್ತಿಯು ಆಲಸ್ಯವನ್ನು ಅನುಭವಿಸಲು ಪ್ರಾರಂಭಿಸುತ್ತಾನೆ. ಹಸಿ ಅಕ್ಕಿಯನ್ನು ಸೇವಿಸುವುದರಿಂದ ದೈಹಿಕ ಆಯಾಸ ಉಂಟಾಗಿ ದೇಹದ ಶಕ್ತಿ ಕುಂಠಿತವಾಗುತ್ತದೆ. ನಿಶ್ಯಕ್ತಿಯಿಂದಾಗಿ ಅನೇಕ ರೀತಿಯ ಕಾಯಿಲೆಗಳು ಸಹ ಸಂಭವಿಸಬಹುದು.