HEALTH TIPS

ವನವಾಸಿಗಳ ವ್ಯಾಪಕ ಮತಾಂತರ: ಕರ್ನಾಟಕದಲ್ಲಿ ಮಲಯಾಳಿ ದಂಪತಿ ಬಂಧನ

                   ಕೊಡಗು: ಕರ್ನಾಟಕದ ಮಡಿಕೇರಿ ಭಾಗದಲ್ಲಿ ಅರಣ್ಯವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸಲು ಯತ್ನಿಸಿದ ಇಬ್ಬರು ಕೇರಳೀಯರನ್ನು ಬಂಧಿಸಲಾಗಿದೆ. ದಂಪತಿ ಕುರಿಯಾಚನ್ (62) ಮತ್ತು ಸೆಲಿನಮ್ಮ (57) ಅವರನ್ನು ಪೋಲೀಸರು ಬಂಧಿಸಿದ್ದಾರೆ. ಅವರು ಮಾನಂತವಾಡಿಯವರು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

                ವನವಾಸಿ ಸಮುದಾಯದ ಪಣಿಯಾರವರ  ಮುತ್ತ ಹಾಗೂ ಕುಟುಂಬದವರನ್ನು ಭೇಟಿ ಮಾಡಿ ಮತಾಂತರಕ್ಕೆ ಯತ್ನಿಸಿದ್ದರು ಎನ್ನಲಾಗಿದೆ. ಮಂಗಳವಾರ ಸಂಜೆ ಕೊಡಗಿನ ಕುಟ್ಟ ಪ್ರದೇಶದ ಆದಿವಾಸಿ ಕಾಲೋನಿಗೆ ಮಲಯಾಳಿ ದಂಪತಿ ಆಗಮಿಸಿದ್ದರು. ಮತಾಂತರಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳೊಂದಿಗೆ ದಂಪತಿಗಳು ಆಗಮಿಸಿದರು.

                  ಆದರೆ, ಘಟನೆ ಆ ಭಾಗದ ಹಿಂದೂ ಸಂಘಟನೆಗಳ ಗಮನಕ್ಕೆ ಬಂದಿದ್ದು, ಪೋಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಜರಂಗದಳದ ಕಾರ್ಯಕರ್ತ ಸಜ್ಜನ್ ಗಣಪತಿ ಮಾತನಾಡಿ, ಇದುವರೆಗೆ ಮತಾಂತರಗೊಂಡವರ ಪಟ್ಟಿಯನ್ನು ದಂಪತಿ ಹೊಂದಿದ್ದಾರೆ. ಇವೆಲ್ಲವನ್ನೂ ಪೋಲೀಸರಿಗೆ ಒಪ್ಪಿಸಲಾಗಿದೆ ಎಂದು ತಿಳಿಸಿದರು. ಪೋಲೀಸರು ದಂಪತಿ ವಿರುದ್ಧ ಕರ್ನಾಟಕ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

                    ಕುಟ್ಟ ಪ್ರದೇಶವೊಂದರಲ್ಲೇ ಇದುವರೆಗೆ ಸಾವಿರಾರು ಜೋಡಿಗಳು ಮತಾಂತರಗೊಂಡಿರುವ ಬಗ್ಗೆ ವರದಿಯಾಗಿದೆ. ಮತಾಂತರಿಸುವ ಕ್ರೈಸ್ತ ದಂಪತಿಗಳು ಮುಖ್ಯವಾಗಿ ಯೆರವ ಸಮುದಾಯದವರನ್ನು ಗುರಿಯಾಗಿಸಿಕೊಂಡಿರುವ ಸೂಚನೆಗಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries