ಕುಂಬಳೆ: ಬಕ್ತಿಯಿಂದ ಜಗದೀಶ್ವರನನ್ನು ನೆನೆಯುವುದೇ ಬಜನೆ ಎಂದು ಪ್ರಸಿದ್ಧ ಹರಿದಾಸ ಕಲಾರತ್ನ ಶಂನಾಡಿಗ ಕುಂಬಳೆ ಅಭಿಪ್ರಾಯಪಟ್ಟರು.
ಅವರು ಅಂಗಡಿಮೊಗರು ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಬಜನಾ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ಜರಗಿದ ದರ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಸೇವಾ ಸಮಿತಿ ಅರ್ದಐಕ್ಷ ಡಿ.ದಾಮೋದರನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಆಡಳಿತ ಮೊಕ್ತೇಸರ ನ್ಯಾಯವಾದಿ ಬಿ ಸುಬ್ಬಯ್ಯ ರೈ, ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ, ಎಂ. ಶಂಕರ ರೈ ಮಾಸ್ತರ್, ಪುತ್ತಿಗೆ ಕುಮಾರಸ್ವಾಮಿ ಭಜನಾ ಮಂಡಳಿ ಅಧ್ಯಕ್ಷ ಬಾಬು ಬಂಗೇರ ಪುತ್ತಿಗೆ, ಮುಂಡಿತ್ತಡ್ಕ ಶ್ರೀ ಮಹಾವಿಷ್ಣು ಭಜನಾ ಸಂಘದ ಅಧ್ಯಕ್ಷ ಶಾಂತಕುಮಾರ್, ಸಿ. ಸಂಜೀವ ಸಂಚಾಲಕರು ಶ್ರೀ ಕೃಷ್ಣ ಭಜನಾ ಸಂಘ ಬಾಡೂರು ಮೊದಲಾದವರು ಮಾತನಾಡಿ ಶುಭ ಹಾರೈಸಿದರು. ಇದೇ ಸಂದರ್ಭಲ್ಲಿ ಸಂಘದ ಸ್ಥಾಪಕ ಸದಸ್ಯ ಗೋಪಾಲಕೃಷ್ಣ ಮಯ್ಯ, ಪ್ರಸಿದ್ಧ ಜ್ಯೋತಿಷಿ ಶಂಕನಾರಾಯಣ ಕಾರಂತ, ಎನ್ ತಿಮ್ಮಣ್ಣ ರೈ ಮೊಗರು, ನಾರಾಯಣ ಮಯ್ಯ ಕಾಟುಕುಕ್ಕೆ, ಕೃಷ್ಣಯ್ಯ ಸ್ಥಾನಿಕರು, ಎ.ಡಿ ಕೊರಗಪ್ಪ ಮೊದಲಾದವರನ್ನು ಗೌರವಿಸಲಾಯಿತು. ಈ ಸಂದರ್ಭ ಮಂಗಳೂರು ವಿಶ್ವವಿದ್ಯಾಲಯದಿಂದ ಗಣಕ ವಿಜ್ಞಾನ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ ಡಾ. ರತ್ನಾಕರ ಶೆಟ್ಟಿಯವರನ್ನು ಕ್ಷೇತ್ರ ಸೇವಾ ಸಮಿತಿ ವತಿಯಿಂದ ಗೌರವಿಸಲಾಯಿತು. ಸೂರ್ಯ ರೈ ನೈಮೊಗೇರು ಸ್ವಾಗತಿಸಿದರು. ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಅರುಣ್ ಕುಮಾರ್ ವರದಿ ಮಂಡಿಸಿದರು. ಪ್ರವೀಣ್ ಕುಮಾರ್ ವಂದಿಸಿದರು. ಉಪನ್ಯಾಸಕ ಡಿ ರಾಜೇಂದ್ರ ರೈ ಕಾರ್ಯಕ್ರಮ ನಿರೂಪಿಸಿದರು.
ಸುವರ್ಣ ಮಹೋತ್ಸವದ ಅಂಗವಾಗಿ 24 ಗಂಟೆ ಭಜನಾ ಸಂಕೀರ್ತನೆ ಶ್ರೀ ದೇವರಿಗೆ ಶತರುದ್ರಾಭಿಶೇಕ ಹಾಗೂ ನವಕಾಭಿಶೇಕವು ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ ಅವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವನದುರ್ಗಾಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ದೇಂತಡ್ಕ ಇವರಿಂದ ವನದುರ್ಗಾ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.