ಕಣ್ಣೂರು: ಸಚಿವ ಎಂವಿ ಗೋವಿಂದನ್ ಅವರ ವಾಹನ ಅಪಘಾತಕ್ಕೀಡಾಗಿದೆ. ಕಣ್ಣೂರು ತಲಪ್ಪಿಲ್ ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಸಚಿವರ ಕಾರು ಡಿವೈಡರ್ ಮೇಲೇರಿ ಹೋಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಅಪಘಾತದ ನಂತರ ಸಚಿವರನ್ನು ಬೇರೆ ವಾಹನದಲ್ಲಿ ಮನೆಗೆ ಕಳುಹಿಸಲಾಯಿತು.
ಎಂ.ವಿ.ಗೋವಿಂದನ್ ಅವರು ಕೇರಳದ ಅಬಕಾರಿ ಮತ್ತು ಸ್ಥಳೀಯಾಡಳಿತ ಸಚಿವರು. ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ತಳಿಪರಂಬ ಕ್ಷೇತ್ರದಿಂದ ಗೆದ್ದವರು.