ಕಾಸರಗೋಡು: ವಿಷಾಹಾರ ಸೇವನೆಯಿಂದ ಮೃತಪಟ್ಟ ಶವರ್ಮಾ ವಿದ್ಯಾರ್ಥಿನಿ ಕೂಲ್ ಬಾರ್ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಚೆರುವತ್ತೂರು ಬಸ್ ನಿಲ್ದಾಣದ ಬಳಿ ಇರುವ ಐಡಿಯಲ್ ಫುಡ್ ಪಾಯಿಂಟ್‍ನ ವ್ಯಾನ್ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬೆಳಗ್ಗೆ ಪತ್ತೆಯಾಗಿದೆ. ಚಂದೇರ ಪೆÇಲೀಸರು ವಾಹನವನ್ನು ಠಾಣೆಗೆ ಸ್ಥಳಾಂತರಿಸಿದರು.
ಮುಖ್ಯರಸ್ತೆಯ ಪಕ್ಕದಲ್ಲಿರುವ ಸಂಸ್ಥೆಯ ಉತ್ತರ ಭಾಗದಲ್ಲಿ ವ್ಯಾನ್ ನಿಂತಿತ್ತು. ಬೆಳಗ್ಗೆ ಸ್ಥಳೀಯರು ವಾಹನ ಸುಟ್ಟು ಕರಕಲಾಗಿರುವುದು ಪತ್ತೆಹಚ್ಚಿದರು. ತಕ್ಷಣ ಪೋಲೀಸರಿಗೆ ಮಾಹಿತಿ ನೀಡಲಾಯಿತು. ಕೋಡಲೇ ಪೋಲೀಸರು ಆಗಮಿಸಿ ವಾಹನವನ್ನು ಠಾಣೆಗೆ ಸ್ಥಳಾಂತರಿಸಿದರು. ಬೆಂಕಿಯಿಂದ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.
ನಿನ್ನೆ ಅಂಗಡಿ ಮುಂದೆ ಕಲ್ಲುಗ|ಳನ್ನು ಎಸೆಯಲಾಗಿತ್ತು. ಆದರೆ ಪೋಲೀಸರು ಇದ್ದುದರಿಂದ ಸಮಸ್ಯೆ ಬಿಗಡಾಯಿಸಲಿಲ್ಲ. ರಾತ್ರಿ ಅಂಗಡಿ ಬಳಿ ಪೋಲೀಸರು ಇದ್ದಿರÀಲಿಲ್ಲ. ಇದರಿಂದ ವಾಹನಕ್ಕೆ ಬೆಂಕಿ ಹಚ್ಚಿ ಕೋಪ ತೀರಿಸಲಾಗಿದೆ ಎನ್ನಲಾಗಿದೆ.
ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಕೂಲ್ ಬಾರ್ ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಮಂಗಳೂರು ನಿವಾಸಿ ಅನಾಕ್ಸ್ ಹಾಗೂ ನೇಪಾಳ ಮೂಲದ ಸಂದೇಶ್ ರಾಯ್ ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಅವರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಂತರ ಬಂಧನವನ್ನು ದಾಖಲಿಸಲಾಗಿದೆ. ಅವರ ವಿರುದ್ಧ ನರಹತ್ಯೆಯ ಪ್ರಕರಣ ದಾಖಲಿಸಲಾಗಿದೆ. ಕೂಲ್ ಬಾರ್ ಮಾಲೀಕ ಅಹಮದ್ ಅವರನ್ನೂ ಪೋಲೀಸರು ವಶಕ್ಕೆ ಪಡೆದಿದ್ದಾರೆ. ಷವರ್ಮಾದಿಂದ ವಿಷಬಾಧೆಗೊಳಗಾದ ಮೂವರ ಸ್ಥಿತಿ ಇನ್ನೂ ಚಿಂತಾಜನಕವಾಗಿ ಐಸಿಯುಗೆ ದಾಖಲಿಸಲಾಗಿದೆ.