ಕಾಕಿನಾಡ: 'ಅಸನಿ' ಚಂಡಮಾರುತದ ಪ್ರಭಾವದಿಂದ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಹಲವೆಡೆ ಬುಧವಾರ ಬೆಳಿಗ್ಗೆ ಭಾರಿ ಮಳೆಯಾಗಿದೆ.
ಕಾಕಿನಾಡ: 'ಅಸನಿ' ಚಂಡಮಾರುತದ ಪ್ರಭಾವದಿಂದ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಹಲವೆಡೆ ಬುಧವಾರ ಬೆಳಿಗ್ಗೆ ಭಾರಿ ಮಳೆಯಾಗಿದೆ.
ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಿಂದ ಉತ್ತರ ಆಂಧ್ರ ಕರಾವಳಿಯತ್ತ ಚಲಿಸುತ್ತಿದೆ.
ಆಂಧ್ರ ಪ್ರದೇಶದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಅಧಿಕಾರಿಗಳೂ ತಿಳಿಸಿದ್ದರು.
ತೆಲಂಗಾಣದ ನಲ್ಗೊಂಡಾ, ಸೂರ್ಯಪೇಟ್, ಭದ್ರಾದ್ರಿ, ಕೊಥಗುಡೆಂ, ಖಮ್ಮಮ್ ಹಾಗೂ ಮುಲುಗು ಜಿಲ್ಲೆಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿಶಾಖಪಟ್ಟಣದಲ್ಲಿನ ದೃಶ್ಯ