ಕುಂಬಳೆ: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಬ್ರಹ್ಮಕಲಶೋತ್ಸವ ಕಾರ್ಯಗಳು ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗುತ್ತಿದ್ದು ನಾಳೆ(ಬುಧವಾರ ಮೇ 25) ಬೆಳಗ್ಗೆ 7.30ರಿಂದ 8.03ರ ಮಿಥುನ ಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಮಂತ್ರಾಕ್ಷತೆ ಜರಗಲಿದೆ. ಮಂಗಳವಾರ ಕ್ಷೇತ್ರದಲ್ಲಿ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವ ಹೋಮ, ತತ್ವಕಲಶ ಪೂಜೆ, ಕುಂಭೇಶ ಕರ್ಕರಿ ಪೂಜೆ, ಶಯ್ಯಾಪೂಜೆ, ಅಧಿವಾಸ ಹೋಮದ ಅಗ್ನಿಜನನ, ತತ್ವಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯೋನ್ನಯನ, ಅಂಕುರಪೂಜೆ ಜರಗಿತು. ಸಂಜೆ ಧ್ಯಾನಾಧಿವಾಸ, ಅದಿವಾಸ ಹೋಮ, ಶಿರಸ್ತತ್ವ ಹೋಮ, ಪ್ರತಿಷ್ಠಾ ಹೋಮ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಬ್ರಹ್ಮಕಲಶ ಮಹಾಪೂಜೆ ಜರಗಿತು.
ಪ್ರತೀದಿನ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯುತ್ತಿದೆ. ಮಧ್ಯಾಹ್ನದ ಮಹಾಪೂಜೆ ಹಾಗೂ ಅನ್ನದಾನದಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು.
ಮೇ 25ರ ಕಾರ್ಯಕ್ರಮಗಳು :
ಪ್ರಾತಃಕಾಲ 5 ಗಂಟೆಯಿಂದ 108 ತೆಂಗಿನಕಾಯಿ ಗಣಪತಿ ಹೋಮ, ಪ್ರತಿಷ್ಠಾಪಾಣಿ, 7 ಗಂಟೆಯಿಂದ ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ರುದ್ರಪಾರಾಯಣ, ಬೆಳಿಗ್ಗೆ ಗಂಟೆ 7.30ರಿಂದ ಮಿಥುನ ಲಗ್ನ ಸುಮುಹೂರ್ತದಲ್ಲಿ ಶ್ರೀ ದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾಬಲಿ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ ಜರಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಬೆಳಿಗ್ಗೆ 10 ಕ್ಕೆ ಸಿದ್ಧಾರ್ಥ ಪ್ರಕಾಶ್ ಚೆನ್ನೈ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ, ಮಧ್ಯಾಹ್ನ 12 ರಿಂದ ಶ್ರೀ ಸಾಯಿ ಮನೋಹರ್ ಮತ್ತು ಬಳಗದವರಿಂದ ಗೋಪಾಲಕೃಷ್ಣ ಕೆ.ವೀರಾಂಜನೇಯ ಕ್ಷೇತ್ರ ಕುದ್ರೆಪ್ಪಾಡಿ ಪ್ರಾಯೋಜಕತ್ವದಲ್ಲಿ ಭಕ್ತಿ ಸಂಗೀತ ರಸಮಂಜರಿ, ಮಧ್ಯಾಹ್ನ 3 ರಿಂದ ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಸಂಘದವರಿಂದ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಎಡನಾಡು ಇವರ ಸಹಕಾರದಲ್ಲಿ ಯಕ್ಷಗಾನ ತಾಳಮದ್ದಲೆ, ಸಂಜೆ 5 ಕ್ಕೆ ಧಾರ್ಮಿಕ ಸಭೆ, ರಾತ್ರಿ 7.30ರಿಂದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ಬಳಗದವರಿಂದ ನೃತ್ಯಾರ್ಪಣಂ ಪ್ರದರ್ಶನಗೊಳ್ಳಲಿದೆ.