ಕಾಸರಗೋಡು: ಪಯಸ್ವಿನಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮೂವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಕುಂಡಂಕುಳಿ ತೋಣಿಕಡವು ಚೊಟ್ಟೆ ಈ ಘಟನೆ ನಡೆದಿದೆ. ಮೃತರನ್ನು ಕರ್ನಾಟಕ ಮೂಲದ ನಿತಿನ್ (40), ಅವರ ಪತ್ನಿ ದೀಕ್ಷಾ (30) ಮತ್ತು ನಿತಿನ್ ಅವರ ಸಹೋದರ ಮನೀಶ್ (16) ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ.
ನದಿಯಲ್ಲಿ ಸ್ನಾನ ಮಾಡುತ್ತಿದ್ದ ದೀಕ್ಷಾ ಸುಳಿಗೆ ಸಿಲುಕಿದ್ದು, ಅವರನ್ನು ರಕ್ಷಿಸಲು ನೀರಿಗಿಳಿದ ಪತಿ ಹಾಗೂ ಮೈದುನ ಮುಳುಗಿದರು. ಪೋಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ನಡೆಸಿದ ಶೋಧದಲ್ಲಿ ಮೂವರ ಶವ ಪತ್ತೆಯಾಗಿದೆ.
ಕುಂಡಂಗುಳಿ ತೋಣಿಕಡವು ಚೊಟ್ಟೆ ಎಂಬಲ್ಲಿ ಹೊಳೆಗೆ ಸ್ನಾನಕ್ಕಾಗಿ ಇಳಿದಿದ್ದ ಸಂದರ್ಭ ನೀರಿನ ಸೆಳೆತಕ್ಕೆ ಸಿಲುಕಿದ್ದರೆನ್ನಲಾಗಿದೆ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ನಿದಿನ್ ಇತ್ತೀಚೆಗಷ್ಚಟೆ ಊರಿಗೆ ಆಗಮಿಸಿದ್ದರು. ಸಂಬಂಧಿಕರೊಂದಿಗೆ ಸೋಮವಾರ ಮಧ್ಯಾಹ್ನ ಎರಿಞÂಪುಯ ಹೊಳೆ ಕಾಣಲು ಆಗಮಿಸಿದ್ದರು. ನಿದಿನ್ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭ ಪತ್ನಿ ದೀಕ್ಷಾ ಆಯತಪ್ಪಿ ಹೊಳೆಗೆ ಬಿದ್ದಿದ್ದು, ಇವರನ್ನು ರಕ್ಷಿಸಲು ನಿದಿನ್ ನೀರಿಗೆ ಧುಮುಕಿದ್ದರು. ಇಬ್ಬರೂ ಮುಳುಗೇಳುತ್ತಿರುವುದನ್ನು ಕಂಡು ಮನೀಶ್ ಕೂಡಾ ನೀರಿಗೆ ಹಾರಿದ್ದು, ಮೂರೂ ಮಂದಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದರು. ತಕ್ಷಣ ಅಗ್ನಿಶಾಮಕ ದಳ, ಪೊಲೀಸ್ ಹಾಗೂ ನಾಗರಿಕರು ಸೇರಿ ಕಾರ್ಯಾಚರಣೆ ನಡೆಸಿದರೂ. ರಕ್ಷಿಸಲು ಸಾಧ್ಯವಾಗಿರಲಿಲ್ಲ. ಮೃತದೇಹ ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ.
ನಿನ್ನೆ ಚೆರ್ವತ್ತೂರಿನ ದೇವನಂದೆ ಎಂಬ ಬಾಲಕಿ ಶವರ್ಮ ಸೇವಿಸಿ ಮೃತಳಾಗಿದ್ದಳು. ಹೀಗೆ ದುಃಖದ ಛಾಯೆ ಕಳೆದ ಎರಡು ದಿನಗಳಿಂದ ಜನತೆಯನ್ನು ಶೋಕತಪ್ತಗೊಳಿಸಿದೆ.