ಕಾಸರಗೋಡು: ಸಾಗುವಾನಿ ಮರದ ತುಂಡುಗಳಿಂದ ಚಿತ್ರಗಳನ್ನು ಮಾಡುವ ಮೂಲಕ ಮಾರುಕಟ್ಟೆ ಮೇಳದಲ್ಲಿ ಕಾಲಿಕ್ಕಡವುವಿನ ಲತಿರಾಜೇಶ್ ಸ್ಟಾರ್ ಆಗಿದ್ದಾರೆ. ಸಾಗುವಾಣಿ ಮರದ ಮೇಲೆ ಚಿತ್ರಗಳನ್ನು ರಚಿಸಿ, ಅವುಗಳನ್ನು ಬ್ಲೇಡ್‍ನಿಂದ ಕೆತ್ತಿ ಆಕರ್ಷಕ ಚಿತ್ರಗಳನ್ನು ತಯಾರಿಸುತ್ತಾರೆ. 20 ವರ್ಷಗಳ ಹಿಂದೆ ಪತಿ ರಾಜೇಶ್ ಆರಂಭಿಸಿದ ಕಲಾಗಾರಿಕೆಯನ್ನು ಲತಿ ರಾಜೇಶ್ ನೋಡಿ ಕಲಿತುಕೊಂಡಿದ್ದಾರೆ.
ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿರುವ ರಾಜೇಶ್, ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಈ ಕಲೆಯನ್ನು ಅರ್ಧಕ್ಕೆ ಬಿಡಲಾಗದೆ, ತಾನು ಮುಂದುವರಿಸಿದ್ದಾರೆ. ಹದಿನೈದು ವರ್ಷದ ಅನು ಚಂದ್ ಮತ್ತು ಎಂಟು ವರ್ಷದ ಮೃಣಾಲ್ ಕೃಷ್ಣ ಕೂಡ ಕೆತ್ತನೆ ಕೆಲಸದಲ್ಲಿ ತಮ್ಮ ತಾಯಿಗೆ ಸಹಾಯ ಮಾಡುತ್ತಾರೆ. ಪರಿಸ್ಥಿತಿಗೆ ಅನುಗುಣವಾಗಿ 800 ರಿಂದ 2500 ರೂ. ವರೆಗಿನ ಮರದಕೆತ್ತನೆಯ ಕಲಾಕೃತಿಗಳನ್ನು ಲತಿ ರಆಜೇಶ್ ತಯಾರಿಸುತ್ತಾರೆ. ಸಾಗುವಾನಿ ಮರದಿಂದ ಈ ಕುಸುರಿ ಕಲಾಕೃತಿ ತಯಾರಿಸಲಾಗುತ್ತಿದ್ದು, ದೀರ್ಘಕಾಲ ಬಾಳ್ವಿಕೆ ಬರುತ್ತಿರುವುದರಿಂದ ಹೆಚ್ಚಿನ ಬೇಡಿಕೆಯಿದೆ. ಒಂದು ಮರದ ಕೆತ್ತನೆ ತಯಾರಿಸಲು ನಾಲ್ಕು ದಇವಸಗಳ ಕಾಲಾವಕಾಶ ತಗಲುತ್ತಿರುವುದಾಗಿ ಲತಿರಾಜೇಶ್ ತಿಳಿಸುತ್ತಾರೆ.