ಕಾಸರಗೋಡು: ವಿದ್ಯಾನಗರ ಉದಯಗಿರಿ ಸರ್ಕಾರಿ ನೌಕರರ ಕ್ವಾರ್ಟರ್ಸ್ (ಜಿಇಕ್ಯೂಐಎ)ಅಸೋಸಿಯೇಶನ್ ವಾರ್ಷಿಕೋತ್ಸವವನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ (ಐಎಎಸ್) ಉದ್ಘಾಟಿಸಿದರು. ಸರ್ಕಾರಿ ನೌಕರರ ಕ್ವಾರ್ಟರ್ಸ್ ಇನ್‍ಮೇಟ್ಸ್ ಸಂಘದ ಅಧ್ಯಕ್ಷ ನಾರಾಯಣ ಕೊಳತ್ತೂರು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಿಐ ಹಾಗೂ ಚಲನಚಿತ್ರ ನಟ ಸಿಬಿ ಥಾಮಸ್, ಮಧೂರು ಗ್ರಾಮ ಪಂಚಾಯಿತಿ ಸದಸ್ಯೆ ಸ್ಮಿತಾ ಸುಧಾಕರನ್, ರಾಷ್ಟ್ರೀಯ ಹೆದ್ದಾರಿ ಎಲ್. ಎ. ವಿಭಾಗದ ಅಪರ ಜಿಲ್ಲಾಧಿಕಾರಿ ಕೆ. ಅಜೇಶ್, ರಾಜ್ಯ ಜಿ. ಎಸ್. ಟಿ. ಇಲಾಖೆ ಜಂಟಿ ಆಯುಕ್ತ ಪಿ. ಸಿ. ಜಯರಾಜನ್, ಕಂದಾಯ ಇಲಾಖೆ ತಹಸೀಲ್ದಾರ್ ಪಿ. ಜೆ. ಆಂಟೊ, ಜಿ ಇ ಕ್ಯೂ ಐ ಎ ಉಪಾಧ್ಯಕ್ಷ ಇ. ಕೆ. ಅರ್ಜುನನ್ ಮತ್ತು ಕೋಶಾಧಿಕಾರಿ ರಾಘವನ್ ಚುಳ್ಳಿಕಾರ. ಜಿಇಕ್ಯೂಐ ಕಾರ್ಯದರ್ಶಿ ಉಮ್ಮರ್ ಅನುನಕ್ಕಂ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎ.ಎಸ್. ಶೀಜಾ ವಂದಿಸಿದರು.