ಭುವನೇಶ್ವರ: ವರ್ಷದ ಮೊದಲ ಚಂಡಮಾರುತ ಎದುರಿಸಲು ಒಡಿಶಾ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮಂಗಳವಾರ ಕರಾವಳಿ ತೀರಕ್ಕೆ ಬಂದಪ್ಪಳಿಸಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ನಡುವೆ ಭಾನುವಾರದಿಂದಲೇ ಮಳೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.

ಪಶ್ಚಿಮ ಬಂಗಾಳದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಸದ್ಯ ಒಡಿಶಾದ ಪೂರಿ ಕರಾವಳಿ ತೀರದಿಂದ 1020 ಕಿಮೀ ದೂರದಲ್ಲಿದ್ದು, ಮಂಗಳವಾರ 16 ಕಿ.ಮೀ, ವೇಗದಲ್ಲಿ ಬಂದಪ್ಪಳಿಸಲಿದೆ ಎಂದು ತಿಳಿಸಿದೆ.
ಆಸನಿ ಹೆಸರಿನ ಚಂಡಮಾರುತ ಎಷ್ಟು ಭೀಕರತೆ ಸೃಷ್ಟಿಸಲಿದೆ ಎಂಬುದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಎದುರಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಮುನ್ನೆಚ್ಚರಿಕೆ ನೀಡಲಾಗಿದೆ. ಅಂತೆಯೇ ಒಡಿಶಾ ಸರ್ಕಾರ ಕರಾವಳಿ ತೀರದಲ್ಲಿ ಎಚ್ಚರಿಕೆ ಕ್ರಮ ಕೈಗೊಂಡಿದ್ದು, ಎನ್ಡಿಆರ್ಎಫ್ ತಂಡವನ್ನು ಸಿದ್ಧತೆ ಮಾಡಿಕೊಂಡಿದೆ.
ಆಸನಿ ಎಂದರೆ ಶ್ರೀಲಂಕಾ ಭಾಷೆಯಲ್ಲಿ ಕ್ರೋಧ ಎಂದು ಅರ್ಥೈಸಲಾಗುತ್ತದೆ. ಇದನ್ನೇ ಈ ಚಂಡಮಾರುತಕ್ಕೆ ಹೆಸರಿಸಲಾಗಿದ್ದು, ಭಾನುವಾರ ಸಂಜೆ 5.30ರವೇಳೆಗೆ ತನ್ನ ವೇಗ ಹೆಚ್ಚಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಹೆಚ್ಚು ಹಾನಿ ಸಂಭವಿಸುವ ಸಾಧ್ಯತೆ ಇಲ್ಲ ಎಂದಾದರೂ ಚಂಡಮಾರುತದಿಂದ ಹಲವು ಪರಿಣಾಮ ಬೀರಬಹುದು ಎಂದೂ ತಿಳಿಸಿದೆ. ಆಂದ್ರ ಕರಾವಳಿ ಮೇಲೂ ಹಾದುಹೋಗಲಿದ್ದು, ಒಡಿಶಾದ ಗಂಜಮ್, ಗಜಪತಿ, ಖೊರ್ಧಾ ಮತ್ತು ಪೂರಿ ಜಿಲ್ಲೆಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸಲಿದ್ದು, ಇದರಿಂದ ಸ್ವಲ್ಪನ ಹಾನಿಯಾಗಬಹುದೆಂದು ತಿಳಿಸಿದೆ.