ಕೇದಾರನಾಥ: ಉತ್ತರಾಖಂಡದ ಕೇದಾರನಾಥ ದೇವಾಲಯದ ಬಾಗಿಲನ್ನು ಧಾರ್ಮಿಕ ವಿಧಿಗಳು ಮತ್ತು ವೇದ ಪಠಣಗಳೊಂದಿಗೆ ಯಾತ್ರಾರ್ಥಿಗಳಿಗಾಗಿ ತೆರೆಯಲಾಯಿತು.
ಕೇದಾರನಾಥ ದೇವಸ್ಥಾನಕ್ಕೆ ಆಗಮಿಸಿದ್ದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಮತ್ತು ಪತ್ನಿ, ಹಾಗೂ ೧೦ ಸಾವಿರಕ್ಕೂ ಹೆಚ್ಚು ಮಂದಿ ಈ ಶುಭ ಗಳಿಗೆಗೆ ಸಾಕ್ಷಿಯಾಗಿದ್ದರು. ಇದಕ್ಕೂ ಮೊದಲು, ಮೇ 3 ರಂದು, ಅಕ್ಷಯ ತೃತೀಯ ದಿನದಂದು ಗಂಗೋತ್ರಿ ಧಾಮ್ ಮತ್ತು ಯಮುನೋತ್ರಿ ಧಾಮದ ಪೋರ್ಟಲ್ ಗಳನ್ನು ತೆರೆಯುವ ಮೂಲಕ ಚಾರ್ ಧಾಮ್ 2022 ರ ಯಾತ್ರೆಗೆ ಅನುವು ಮಾಡಿಕೊಟ್ಟಿತು.
ಏತನ್ಮಧ್ಯೆ, ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಗಮನದಲ್ಲಿಟ್ಟುಕೊಂಡು ಚಾರ್ ಧಾಮ್ ಯಾತ್ರೆ 2022 ಕ್ಕೆ ಯಾತ್ರಾರ್ಥಿಗಳ ಸಂಖ್ಯೆಯ ಮೇಲೆ ಸರ್ಕಾರವು ದೈನಂದಿನ ಮಿತಿಯನ್ನು ನಿಗದಿಪಡಿಸಿದೆ. ಅಧಿಕಾರಿಗಳು ಕೇದಾರನಾಥ ದೇವಾಲಯದ ದೈನಂದಿನ ಮಿತಿಯನ್ನು 12,000 ಮತ್ತು ಬದರಿನಾಥಕ್ಕೆ 15,000 ಮಂದಿಗೆ ಮೀಸಲಿಟ್ಟಿದ್ದಾರೆ.
ಆದಾಗ್ಯೂ, ಉತ್ತರಾಖಂಡ ಸರ್ಕಾರವು ಚಾರ್ಡ್ ಧಾಮ್ ಯಾತ್ರೆಗೆ ನೆಗೆಟಿವ್ ವರದಿ ಅಥವಾ ಕೋವಿಡ್ -19 ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಹೇಳಿದೆ.