ಕೊಚ್ಚಿ: ವನ್ಯಜೀವಿಗಳ ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಮಾಧವ್ ಗಾಡ್ಗೀಳ್ ಆಗ್ರಹಿಸಿದ್ದಾರೆ. " ದಿ ಹಿಂದೂ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಗಾಡ್ಗೀಲ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಿರುವ ನಿಯಮಗಳನ್ನು ಪುನಃ ಪರಿಶೀಲಿಸದೆ ಸಂಪೂರ್ಣ ಹಿಂಪಡೆಯಬೇಕೆಂದು ಅವರು ತಿಳಿಸಿರುವರು.
ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಲ್ಲಿದೆ ಎಂದು ಗಾಡ್ಗೀಳ್ ಪ್ರಶ್ನಿಸಿದರು. 1975 ರಿಂದ ಆನೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹುಲಿ ಕಾರ್ಯಪಡೆ ನಡೆಸಿದ ತನಿಖೆಯಲ್ಲಿ ಹುಲಿಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಂಡುಬಂದಿದೆ. ಆದರೆ, ಈ ವರದಿಯನ್ನು ಸಿಬಿಐ ತನಿಖೆಗೆ ಒಳಪಡಿಸಿದಾಗ ಅರಣ್ಯಾಧಿಕಾರಿಗಳು ಸುಳ್ಳು ಗಣತಿ ನಡೆಸಿರುವುದು ಕಂಡುಬಂದಿದೆ. ಆದರೆ ಅರಣ್ಯ ಇಲಾಖೆ ಗ್ರಾಮಸ್ಥರನ್ನು ದೂರುವ ಪ್ರಯತ್ನ ಮಾಡಿದೆ ಎಂದು ಗಾಡ್ಗೀಲ್ ಹೇಳಿರುವರು.
ಹುಲಿ ಸಂರಕ್ಷಿತ ಪ್ರದೇಶದಿಂದ ಬಂದಿಳಿಯುವ ಹುಲಿಗಳು ಜನರ ಮೇಲೆ ದಾಳಿ ಮಾಡಿ ಕೊಲ್ಲುತ್ತಿವೆ. ಹಾಗಾಗಿ ಅನುಭವದ ಕೊರತೆಯೇ ವನ್ಯಜೀವಿಗಳ ಜೀವಕ್ಕೆ ಅಪಾಯ ಎಂಬ ವಾದಕ್ಕೆ ಕಾರಣ ಎಂದು ಆರೋಪಿಸಿದರು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಮರುಪರಿಶೀಲಿಸದೆ ರದ್ದುಗೊಳಿಸಬೇಕು. ಮಾನವನ ಮೇಲೆ ಕಾಡು ಪ್ರಾಣಿ ದಾಳಿ ಮಾಡುವುದು ಸಂವಿಧಾನ ಬಾಹಿರ. ದರೋಡೆಕೋರನು ನಿಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಿದರೆ, ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ನೀವು ಅವನನ್ನು ಕೊಲ್ಲಬಹುದು. ಆದರೆ ನಿಮ್ಮ ಜಮೀನಿಗೆ ಕಾಡುಹಂದಿ ಬಂದು ನಿಮ್ಮ ಜೀವನೋಪಾಯವನ್ನೇ ಕಸಿದುಕೊಂಡರೆ? ಎಂದು ಗಂಭೀ|ರ ಪ್ರಶ್ನೆ ಎತ್ತಿರುವರು.
ವನ್ಯಜೀವಿಗಳ ಹಾವಳಿಯಿಂದ ಸಾಮಾನ್ಯ ಜನರ ಸಂಕಷ್ಟವನ್ನು ಅರಣ್ಯ ಇಲಾಖೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಗಾಡ್ಗೀಳ್ ಆರೋಪಿಸಿದರು. ಅರಣ್ಯ ಇಲಾಖೆ ಭ್ರಷ್ಟ, ಜನವಿರೋಧಿ ಮತ್ತು ವೈಜ್ಞಾನಿಕ ವಿರೋಧಿಯಾಗಿದೆ. ವನ್ಯಜೀವಿಗಳ ವಿಚಾರದಲ್ಲಿ ತರ್ಕಬದ್ಧ ನಿರ್ಧಾರ ಅಗತ್ಯ ಎಂದರು. ಇಲ್ಲಿ ಬೇಕಾಗಿರುವುದು ಸ್ವೀಡನ್ ಮತ್ತು ನಾರ್ವೆ ಎರಡೂ ದೇಶಗಳು ಅಳವಡಿಸಿಕೊಂಡ ವಿಧಾನ. ವನ್ಯಜೀವಿಗಳಿಗೆ ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯವಿದೆ ಎಂದು ಅವರು ಅರಿತುಕೊಂಡರು. ಅಲ್ಲಿ ಬೇಟೆಯಾಡಲು ಅನುಮತಿಸಲಾಗಿದೆ ಮತ್ತು ಮಾಂಸವನ್ನು ಮಾರಾಟ ಮಾಡಲಾಗುತ್ತದೆ. "ನನಗೆ ಅಲ್ಲಿ ಜಿಂಕೆ ಮಾಂಸವನ್ನು ಆನಂದಿಸುವ ಸ್ನೇಹಿತರಿದ್ದಾರೆ" ಎಂದು ಗಾಡ್ಗೀಲ್ ಹೇಳಿದರು.
ಮಾಧವ್ ಗಾಡ್ಗೀಳ್ ಮಾತನಾಡಿ, ನಮ್ಮ ದೇಶದಲ್ಲಿ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣವಾದರೆ ಜನ ಸಂಪನ್ಮೂಲಗಳನ್ನು ನೋಡಿಕೊಳ್ಳುತ್ತಾರೆ ಎಂದು ವಿಶಿಷ್ಟ ಚಿಂತನೆಯನ್ನೂ ಬಹಿರಂಗಪಡಿಸಿದರು. .