ತಿರುವನಂತಪುರಂ: ಪೂಜಾ ಕೊಠಡಿಯಲ್ಲಿ ದೀಪ ಬೆಳಗಿಸಲು ಒಬ್ಬ ವ್ಯಕ್ತಿಯನ್ನು ನೇಮಿಸಲಾಗಿದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಹೆಚ್ಚುವರಿ ಆಪ್ತ ಸಹಾಯಕ ಹರಿ ಎಸ್ ಕರ್ತಾ ಹೇಳಿದ್ದಾರೆ.
ರಾಜಭವನದಲ್ಲಿ 140 ವರ್ಷಗಳಷ್ಟು ಹಳೆಯದಾದ ಪೂಜಾ ಕೋಣೆ ಇದೆ. ಇದು ರಾಜರ ಅತಿಥಿ ಗೃಹವಾಗಿತ್ತು. ಪೂಜಾ ಕೋಣೆ ಪ್ರಾಚೀನದಿಂದಲೂ ಇದೆ. ದಶಕಗಳಿಂದ ಪ್ರಾರ್ಥನಾ ಕೊಠಡಿ ಮುಚ್ಚಲ್ಪಟ್ಟಿತ್ತು. ದೀಪ ಬೆಳಗಿಸುತ್ತಿರಲಿಲ್ಲ.
ಜೇಡರ ಬಲೆ, ಧೂಳು ತುಂಬಿದ್ದ ಆ ಕೊಠಡಿ ಬಳಿಕ ಆರೀಪ್ ಮೊಹಮ್ಮದ್ ಖಾನ್ ರಾಜ್ಯಪಾಲರಾಗಿ ಬಂದ ಬಳಿಕ ಶುಚಿಗೊಳಿಸಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪ ಬೆಳಗಿಸಲು ಮತ್ತೆ ಆರಂಭಿಸಲಾಯಿತು. ಇದಕ್ಕಾಗಿ ಪ್ರತ್ಯೇಕ ವ್ಯಕ್ತಿಯನ್ನು ವಿಶೇಷವಾಗಿ ನಿಯೋಜಿಸಲಾಯಿತು ಎಂದು ಕರ್ತಾ ಹೇಳಿದ್ದಾರೆ.
ತಿರುವನಂತಪುರದಲ್ಲಿ ನಡೆದ ಹಿಂದೂ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿ ಈ ಮಾಹಿತಿ ನೀಡಿದರು.