ಕಾಸರಗೋಡು: ರಾಜ್ಯ ಸರ್ಕಾರದ 'ತಿಳಿನೀರಿನ ನವಕೇರಳ' ಕಾರ್ಯಕ್ರಮದ ಅಂಗವಾಗಿ ನೀಲೇಶ್ವರ ಚಿರಪ್ಪುರಂ ತೋಡು ಶುಚೀಕರಣಕಾರ್ಯ ವಿವಿಧ ಸಂಘ ಸಂಸ್ಥೆಗಳ ಸಹಾಯದೊಂದಿಗೆ ನಡೆಯಿತು. ನಗರಸಭೆ ಶುಚೀಕರಣ ವಿಭಾಗದ ಕಾರ್ಯಕರ್ತರು, ಅಯ್ಯಂಗಾಳಿ ನಗರ ಉದ್ಯೋಗ ಖಾತ್ರಿ ಕಾರ್ಮಿಕರು, ಹಸಿರು ಕ್ರಿಯಾ ಸೇನೆ ಸ್ವಯಂಸೇವಕರು, ಕುಟುಂಬಶ್ರೀ ಕಾರ್ಯಕರ್ತರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ನೀಲೇಶ್ವರ ನಗರಸಭೆ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ ಉದ್ಘಾಟಿಸಿದರು. ನಗರಸಭೆ ಸದಸ್ಯೆ ಕೆ.ಜಯಶ್ರೀ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ವಿ.ದಾಮೋದರನ್, ಆರೋಗ್ಯ ನಿರೀಕ್ಷಕರಾದ ಪಿ.ಪಿ.ಮೋಹನನ್, ಒ.ವಿ.ರವೀಂದ್ರನ್, ಪಿ.ಎಂ.ಚಂದ್ರನ್, ಟಿ.ಎನ್.ಪ್ರಸನ್ನ, ಎಂ.ವಿ.ಶ್ರೀಜಾ, ಟಿ.ಶೀಬಾ, ಜೆ.ಎಚ್.ಐ. ಮಾರಯ್ಯ ಟಿ. ನಾರಾಯಣಿ, ಪಿ.ಪಿ.ಸ್ಮಿತಾ, ಕೆ.ಪಿ.ರಚನಾ, ಅಯ್ಯಂಗಾಳಿ ಉದ್ಯೋಗ ಖಾತ್ರಿ ಸಹಾಯಕ ಇಂಜಿನಿಯರ್ ವಿ.ವಿ. ಬಾಬಿಟ್ ಉಪಸ್ಥಿತರಿದ್ದರು. ಕುಟುಂಬಶ್ರೀ ಸಿ.ಡಿ.ಎಸ್ ಅಧ್ಯಕ್ಷೆ ಪಿ.ಎಂ.ಸಂಧ್ಯಾ ಸ್ವಾಗತಿಸಿದರು. ಜೆ.ಎಚ್.ಐ. ಟಿ.ವಿ.ರಾಜನ್ ವಂದಿಸಿದರು.