HEALTH TIPS

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆಯಿಂದ ಕವಿತಾ ಕುಟೀರ ಭೇಟಿ

                 ಬದಿಯಡ್ಕ: ಕರ್ನಾಟಕ ತುಳು  ಸಾಹಿತ್ಯ ಅಕಾಡೆಮಿ ಸದಸ್ಯೆ, ಯುವ ನೇತಾರೆ ಕಾಂತಿ ಶೆಟ್ಟಿ ಅವರು ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಅವರ ಕವಿತಾ ಕುಟೀರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಯ್ಯಾರರ ಸ್ಮರಣೆಗೆ ಸಾಕ್ಷಿಯಾಗಿ ಕಯ್ಯಾರ ಕಿಂಞಣ್ಣ ರೈ ಭವನವು ಆದಷ್ಟು ಬೇಗ ನಿರ್ಮಾಣವಾಗಲಿ. ಅದಕ್ಕೆ ಕಾಸರಗೋಡು ಮತ್ತು ಕರ್ನಾಟಕದ ಜನತೆ ಒಟ್ಟುಗೂಡಿ  ಪ್ರಯತ್ನಿಸುವ ಆ ಮೂಲಕ ಕಾಸರಗೋಡಿನ ಕನ್ನಡಿಗರ ಬಹುದೊಡ್ಡ ಕನಸು  ಯಶಸ್ವಿಯಾಗಿ ಪೂರ್ಣಗೊಳ್ಳಬೇಕಾಗಿದೆ. ಮಾತ್ರವಲ್ಲದೆ ನಿರಂತರವಾಗಿ ಹಲವಾರು ಸಾಹಿತ್ಯ, ಸಾಂಸ್ಕøತಿಕ ಕಾರ್ಯಕ್ರಮಗಳು ಜರಗುವಂತಾಗಲಿ ಎಂದರು.

               ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಚನಿಯಪ್ಪ ನಾಯ್ಕ , ಕಾರ್ತಿಕ್ ಮಂಜೇಶ್ವರ, ಹರೀಶ್  ಗೋಸಾಡ, ವಸಂತ ಬಾರಡ್ಕ,  ಪ್ರದೀಪ್ ರೈ, ಆರತಿ ರೈ ಮುಂತಾದವರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries