HEALTH TIPS

ಸವಾಕ್ ರಾಜ್ಯ ಉಪಾಧ್ಯಕ್ಷರಾಗಿ ಎಂ.ಉಮೇಶ್ ಸಾಲ್ಯಾನ್ ಆಯ್ಕೆ

                    ಆಲಪ್ಪುಳ: ಕಲಾವಿದರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸರಕಾರ ಬದ್ಧವಾಗಿದ್ದು, ಅದಕ್ಕಾಗಿ ಇಂದು ಕಲಾವಿದರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಮಂಡಿಸಿ ಸಮಸ್ಯೆಗಳ ಪರಿಹಾರಕ್ಕೆ ಸಾಧ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪಿ.ಪಿ.ಚಿತ್ತರಂಜನ್ ಹೇಳಿದರು. 

                      ರಂಗ ಕಲಾವಿದರು ಮತ್ತು ಕಾರ್ಮಿಕರ ಸಂಘಟನೆ ಸವಾಕ್ ನ  6ನೇ ರಾಜ್ಯ ಸಮ್ಮೇಳನವನ್ನು ಆಲಪ್ಪುಳದ ಪಿ.ಎಂ. ಅಬುನಗರದಲ್ಲಿರುವ ಪುನ್ನಪ್ರಾ ವಯಲಾರ್ ಸ್ಮಾರಕ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.


         ಸಮ್ಮೇಳನದ ಅಂಗವಾಗಿ ಬೆಳಿಗ್ಗೆ ಎಂ.ಧರ್ಮನ್  ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನದ ಕಲಾಪಕ್ಕೆ ಚಾಲನೆ ನೀಡಿದರು. ಸವಾಕ್ ರಾಜ್ಯಾಧ್ಯಕ್ಷ ಅಲಿಯಾರ್ ಪುನ್ನಪ್ರ ಅಧ್ಯಕ್ಷತೆ ವಹಿಸಿದ್ದರು. ಫ್ರಾನ್ಸಿಸ್ ಟಿ.ಮಾವೇಲಿಕ್ಕರ ಪ್ರಧಾನ ಭಾಷಣ ಮಾಡಿದರು. ಸಿ.ರಾಧಾಕೃಷ್ಣನ್ ಮತ್ತು ಕಮಲ್ ಎಂ.ಮಕ್ಕಿಯಿಲ್ ಮಾತನಾಡಿ ಶುಭಹಾರೈಸಿದರು. 60 ವರ್ಷ ಮೇಲ್ಪಟ್ಟ ಕಲಾವಿದರಿಗೆ ಕಲ್ಯಾಣ ನಿಧಿಗೆ ಸೇರಲು ಮತ್ತೊಂದು ಅವಕಾಶ ನೀಡಬೇಕು. ಸರ್ಕಾರವು ಆಯೋಜಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಮಧ್ಯವರ್ತಿಗಳನ್ನು ಹೊರಗಿಡಲು ಮತ್ತು ಕಾರ್ಯಕ್ರಮಗಳಲ್ಲಿ ಕೇರಳದ ನವೋದಯ ಕಲೆಗಳಿಗೆ ಪ್ರಾಮುಖ್ಯತೆ ನೀಡಲು ಸಮ್ಮೇಳನವು ನಿರ್ಣಯಗಳನ್ನು ಅಂಗೀಕರಿಸಿತು. ಜಾತ್ಯತೀತತೆ, ಪ್ರಜಾಪ್ರಭುತ್ವ ಮತ್ತು ದೇಶದ ಏಕತೆಯನ್ನು ಕಾಪಾಡಲು ರಾಜ್ಯದಲ್ಲಿ ಸಾವಿರಾರು ಚರ್ಚೆಗಳನ್ನು ಆಯೋಜಿಸಲು ಜಿಲ್ಲಾವಾರು ಕಲಾ ಸಮಿತಿಗಳನ್ನು ರೂಪಿಸಲು ನಿರ್ಧರಿಸಲಾಯಿತು. ಸಾಂಸ್ಕøತಿಕ ಸಮಿತಿಗಳಲ್ಲಿ ಸಂಸ್ಥೆಯ ಪ್ರತಿನಿಧಿಗಳನ್ನು ಸೇರ್ಪಡೆಗೊಳಿಸಬೇಕು, ಸಂಗೀತ ನಾಟಕ ಅಕಾಡೆಮಿಯ ಪಿಂಚಣಿಯನ್ನು ರೂ.2,500 ಗಳಷ್ಟು ಹೆಚ್ಚಿಸಬೇಕು ಮತ್ತು ಸಾಂಸ್ಕøತಿಕ ಕಲ್ಯಾಣ ನಿಧಿಯ ಪಿಂಚಣಿಯನ್ನು ರೂ.5,000 ಕ್ಕೆ ಹೆಚ್ಚಿಸಬೇಕು ಎಂದು ಸಮ್ಮೇಳನವು ಒತ್ತಾಯಿಸಿತು. ವಿನೋದ್ ಕುಮಾರ್ ಅಚುಂಬಿತ ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

              ಖ್ಯಾತ ಸಂಗೀತ ನಿರ್ದೇಶಕ ಜಾಯ್ಸ್ ಸ್ಯಾಚ್ಸ್ ನೇತೃತ್ವದಲ್ಲಿ ಪ್ರತಿನಿಧಿಗಳನ್ನು ಸ್ವಾಗತ ಪತ್ರದೊಂದಿಗೆ ಬರಮಾಡಿಕೊಳ್ಳಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ವರ್ಣಂ ಸ್ವಾಗತಿಸಿ, ಚಟುವಟಿಕೆ ವರದಿ ಮಂಡಿಸಿದರು. ಸಮ್ಮೇಳನದಲ್ಲಿ 2022- 2025 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಲಿಯಾರ್ ಪುನ್ನಪ್ರ |(ಅಧ್ಯಕ್ಷರು), ಸುದರ್ಶನನ್ ವರ್ಣಂ(ಪ್ರಧಾನ ಕಾರ್ಯದರ್ಶಿ) ಮತ್ತು ಕೋಶಾಧಿಕಾರಿಯಾಗಿ ಜಿ.ಕೆ.ಪಿಳ್ಳೈ ತೆಕ್ಕೆಡತ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷರಾಗಿ   ಉಮೇಶ್ ಎಂ ಸಾಲಿಯಾನ್ (ಕಾಸರಗೋಡು),ಸದಸ್ಯರಾಗಿ ಪಿ ಟಿ ಸುಬೈರ್ (ಕೋಝಿಕೋಡ್), ನ್ಯಾಯವಾದಿ ಪಿ ಪಿ ವಿಜಯನ್ (ಕಣ್ಣೂರು), ನೆಡುಮುಡಿ ಅಶೋಕ್ ಕುಮಾರ್ (ಆಲಪ್ಪುಳ) ವಿನೋದ್ ಅಚುಂಬಿತಾ (ಆಲಪ್ಪುಳ), ಎಜೆಎಂ ಚಳಕೇರಿ (ಆಲಪ್ಪುಳ), ನ್ಯಾಯವಾದಿ ದೀಪ  ಅಜಿ ಎಂಜಲಕ್ಕೇರಿ(ಪತ್ತನಂತಿಟ್ಟ), ನ್ಯಾಯವಾದಿ ದಿಲೀಪ್ ಚೆರಿಯನಾಡ್(ವಿ.ಎಸ್.ಸುಗಂದಪ್ಪನ್, (ಆಲಪ್ಪುಳ), ಕಾರ್ಯದರ್ಶಿಯಾಗಿ  ಜಿ.ಕೆ.ಪಿಳ್ಳೆ ತೆಕ್ಕೆಡತ್  (ಎರ್ನಾಕುಳಂ) ಖಜಾಂಚಿಯಾಗಿ ಆಯ್ಕೆಯಾದರು. ಪ್ರತಿನಿಧಿಗಳಿಗೆ ಪಿ.ಕೆ.ವಿಜಯನ್ ಹಾಗೂ ಮಹಾಸಭೆಗೆ ರಾಜೇಶ್ವರಿ ಪ್ರಸಾದ್ ಅಭಿನಂದನೆ ಸಲ್ಲಿಸಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries