ಪಾಲಕ್ಕಾಡ್: ಆರ್‍ಎಸ್‍ಎಸ್ ಕಾರ್ಯಕರ್ತ ಸಂಜಿತ್ ಹತ್ಯೆ ಪ್ರಕರಣದ ಪ್ರಮುಖ ಸಂಚುಕೋರನನ್ನು ಬಂಧಿಸಲಾಗಿದೆ. ಆಲತ್ತೂರು ಸರ್ಕಾರಿ ಜಿಎಂಎಲ್ ಪಿ ಶಾಲೆಯ ಶಿಕ್ಷಕ ಹಾಗೂ ಪಾಪ್ಯುಲರ್ ಫ್ರಂಟ್ ನ ವಿಭಾಗೀಯ ಅಧ್ಯಕ್ಷ ಬಾವಾ ಬಂಧಿತ ಆರೋಪಿ. ಕೊಲೆಯಾದ ನಂತರ ತಲೆಮರೆಸಿಕೊಂಡಿದ್ದ ಎಂದು ಪೋಲೀಸರು ತಿಳಿಸಿದ್ದಾರೆ. ಸಂಜಿತ್ ಪ್ರಕರಣದಲ್ಲಿ ಇನ್ನೂ ಎಂಟು ಮಂದಿಯನ್ನು ಬಂಧಿಸಬೇಕಿದೆ.
ನವೆಂಬರ್ 15ರಂದು ನಡುರಸ್ತೆಯಲ್ಲಿ ಹಾಡಹಗಲೇ ಸಂಜಿತ್‍ನನ್ನು ಹತ್ಯೆ ಮಾಡಲಾಗಿತ್ತು. ಘಟನೆ ನಡೆದು ತಿಂಗಳು ಕಳೆದರೂ ಸಂಪೂರ್ಣ ಆರೋಪಿಗಳನ್ನು ಹಿಡಿಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೋಲೀಸರು ಎಚ್ಚೆತ್ತುಕೊಂಡಿಲ್ಲ ಎಂದು ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕುಟುಂಬದವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.