ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ಸೋಲಾರ್ ಪ್ಯಾನೆಲ್ ಉದ್ಘಾಟನೆ ಇಂದು
0
ಮೇ 29, 2022
ಕುಂಬಳೆ: ಕುಂಬಳೆ ಸಹಕಾರಿ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ಅಳವಡಿಸಲಿರುವ ಸೋಲಾರ್ ಪ್ಯಾನೆಲ್ ಘಟಕದ ಉದ್ಘಾಟನೆ ಮೇ.30 ರಂದು(ಇಂದು) ಸಂಜೆ 4 ಕ್ಕೆ ರಾಜ್ಯ ಸಹಕಾರಿ ಮತ್ತು ದಾಖಲಾತಿ ಖಾತೆ ಸಚಿವ ವಿ.ಆರ್.ವಾಸವನ್ ನಿರ್ವಹಿಸುವರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಹಕಾರಿ ಆಸ್ಪತ್ರೆಯ ಆಡಳಿತ ಕಾರ್ಯದರ್ಶಿ ರತ್ನಾಕರ ಜಿ. ವರದಿ ಮಂಡಿಸುವರು. ಸೋಲಾರ್ ನಿರ್ವಹಣೆಯ ಟಿಸಿಎಂ ಸಂಸ್ಥೆಯ ಆಡಳಿತ ನಿರ್ದೇಶಕ ಜೋಸೆಫ್ ವರ್ಗೀಸ್ ಇಂಜಿಕ್ಕಲ್ ಉಪಸ್ಥಿತರಿರುವರು. ಉದುಮ ಶಾಸಕ ಸಿ.ಎಚ್.ಕುಂಞಂಬು, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಕುಂಬಳೆ ಗ್ರಾ.ಪಂ.ಅ|ಧ್ಯಕ್ಷೆ ತಾಹಿರಾ ಯೂಸುಫ್, ಜಿ.ಪಂ. ಮಾಜಿ ಅ|ಧ್ಯಕ್ಷ ಎಂ.ವಿ.ಬಾಲಕೃಷ್ಣನ್, ಸಹಕಾರಿ ಸೊಸೈಟಿಯ ಜಿಲ್ಲಾ ಸಹ ರಿಜಿಸ್ಟಾರ್ ಎ.ರೆಮಾ, ಸಹಕಾರಿ ಯೂನಿಯನ್ ಅಧ್ಯಕ್ಷ ಕೆ.ಆರ್.ಜಯಾನಂದ ಅತಿಥಿಗಳಾಗಿ ಉಪಸ್ಥಿತರಿರುವರು. ಕುಂಬಳೆ ವಿದ್ಯುತ್ ವಿಭಾಗೀಯ ಅಧಿಕಾರಿ ರಾಜೀವನ್ ವಿ.ವಿ, ಮಂಜೇಶ್ವರ ಸಹಾಯಕ ರಿಜಿಸ್ಟಾರ್ ನಾಗೇಶ್, ಕುಂಬಳೆ ಸಹಕಾರಿ ಆಸ್ಪತ್ರೆಯ ಮಾಜಿ ಅಧ್ಯಕ್ಷ ಎ.ಚಂದ್ರಶೇಖರನ್, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಪರಿವೀಕ್ಷಕ ಬಿ.ಅಶ್ರಫ್, ಗ್ರಾ.ಪಂ. ಸದಸ್ಯೆ ಪ್ರೇಮಾವತಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುಬೈರ್ ಸಿ.ಎ., ಜಯರಾಮ ಬಲ್ಲಂಗುಡೇಲು, ರವಿ ಪೂಜಾರಿ, ಅಹಮ್ಮದ್ ಝಾಕೀರ್, ತಾಜುದ್ದೀನ್ ಮೊಗ್ರಾಲ್, ಸುಜಿತ್ ರೈ, ವಿಠಲ ರೈ, ವಿವೇಕಾನಂದ ಎಸ್. ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸುವರು.
Tags