ಕಾಸರಗೋಡು: ಜಿಲ್ಲೆಯಲ್ಲಿ ಪೋಲೀಸರು ನಡೆಸಿದ ತಪಾಸಣೆ ವೇಳೆ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳ ದಾಸ್ತಾನು ವಶಪಡಿಸಿಕೊಳ್ಳಲಾಗಿದೆ. ಕಲ್ಲಕಟ್ಟ ಬಾಂಜಿಮೂಲೆ ಎಂಬಲ್ಲಿ ಬದರುದ್ದೀನ್ ಅವರ ಬಾಡಿಗೆ ಮನೆಯಲ್ಲಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಲ್ಲಕಟ್ಟದಲ್ಲಿ ಬೀಗ ಹಾಕಿರುವ ಮನೆಗೆ ಅಪರಿಚಿತರು ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ವಿದ್ಯಾನಗರ ಠಾಣೆ ಪೋಲೀಸರು ಶೋಧ ಕಾರ್ಯ ನಡೆಸಿದ್ದಾರೆ. ತಪಾಸಣೆ ವೇಳೆ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ನಿಷೇಧಿತ ತಂಬಾಕು ಉತ್ಪನ್ನಗಳ ದೊಡ್ಡ ಸಂಗ್ರಹ ಪತ್ತೆಯಾಯಿತು. ವಶಪಡಿಸಿಕೊಂಡ ತಂಬಾಕು ಉತ್ಪನ್ನಗಳ ತೂಕ ಸುಮಾರು ಐದು ಕ್ವಿಂಟಾಲ್. ಉತ್ಪನ್ನಗಳ ಜೊತೆಗೆ ಮನೆಯೊಳಗೆ ತಂಬಾಕು ಕೂಡ ಪತ್ತೆಯಾಗಿದೆ.
ಘಟನೆಗೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ. ಮನೆ ಬಾಡಿಗೆಗೆ ಪಡೆದಿರುವ ಬದ್ರುದ್ದೀನ್ ಪತ್ತೆಗೆ ಪೋಲೀಸರು ಯತ್ನಿಸುತ್ತಿದ್ದಾರೆ. ಜಿಲ್ಲೆಯ ಹಲವೆಡೆ ಡ್ರಗ್ಸ್ ಮಾರುಕಟ್ಟೆ ಜತೆಗೆ ಅಕ್ರಮ ತಂಬಾಕು ಉತ್ಪನ್ನಗಳ ಮಾರಾಟವೂ ಚುರುಕಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.