ಗುಟ್ಕಾ ( ಪಾನ್ ಮಸಾಲ) ಜಾಹೀರಾತಿನಲ್ಲಿ ಕಾಣಿಸಿಕೊಂಡು 'ಪದ್ಮಶ್ರೀ' ಪುರಸ್ಕೃತ ಬಾಲಿವುಡ್ ನಟ ಶಾರುಖ್ ಖಾನ್, ಅಜಯ್ ದೇವ್‌ಗನ್, ಅಕ್ಷಯ್ ಕುಮಾರ್ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಗಳಿಸಿದರು ಎಂದು ಹೊಸತಾಗಿ ಹೇಳಬೇಕಿಲ್ಲ, ಅದೇ ರೀತಿ 'ರಾಕಿಂಗ್ ಸ್ಟಾರ್' ಯಶ್ ( ಙಚಿsh ), ಅಲ್ಲು ಅರ್ಜುನ್ ( ಂಟಟu ಂಡಿರಿuಟಿ ) ಅವರು 'ಯಾವುದೇ ಕಾರಣಕ್ಕೂ ಈ ಜಾಹೀರಾತು ಮಾಡೋದಿಲ್ಲ' ಎಂದು ಹೇಳಿ ಜನರ ಮೆಚ್ಚುಗೆ ಗಳಿಸಿದರು ಎಂಬುದಂತೂ ಗೊತ್ತೇ ಇದೆ. ಗುಟ್ಕಾ ಪ್ರಚಾರ ಮಾಡದಿದ್ದರೂ ಕೂಡ 'ಗುಟ್ಕಾ ಕಿಂಗ್' ಎಂದು ಯಾರಿಗಾದರೂ ಕರೆದರೆ ಏನಾಗುವುದು? ಅದರಲ್ಲಿಯೂ ಸಾರ್ವಜನಿಕ ವೇದಿಕೆಯಲ್ಲಿ ಬಾಲಿವುಡ್ ನಟನಿಗೆ ಕರೆದರೆ?
ಸಮಾಜದ ದೃಷ್ಟಿಯಿಂದ ಕೋಟ್ಯಂತರ ರೂ. ಹಣವನ್ನು ತಿರಸ್ಕರಿಸಿದ ಇವರೆಲ್ಲ ರೀಲ್ ಅಲ್ಲ, ರಿಯಲ್ ಹೀರೋಗಳು
ಪ್ರೇಕ್ಷಕ ಹೇಳಿದ್ದೇನು? ಸುನೀಲ್ ಶೆಟ್ಟಿ ಉತ್ತರ ಏನಾಗಿತ್ತು?
ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರಿಗೆ ಟ್ವಿಟ್ಟರ್‌ನಲ್ಲಿ ಅಭಿಮಾನಿಯೊಬ್ಬ 'ಗುಟ್ಕಾ ಕಿಂಗ್' ಎಂದು ಕರೆದಿದ್ದಾನೆ. "ಹೇಯ್, ಗುಟ್ಕಾ ಕಿಂಗ್ ಆಫ್ ಇಂಡಿಯಾ ಶಾರುಖ್ ಖಾನ್, ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ. ಇಡೀ ದೇಶವನ್ನು ನೀವು ತಪ್ಪಿನೆಡೆಗೆ ಕರೆದುಕೊಂಡು ಹೋಗುತ್ತಿದ್ದೀರಿ, ಮಕ್ಕಳು ಕೂಡ ನಿಮ್ಮನ್ನು ನೋಡಿ ನಾಚಿಕೆ ಪಡುತ್ತಾರೆ. ಕ್ಯಾನ್ಸರ್ ರಾಷ್ಟ್ರ ಆಗುವಂತೆ ಮಾಡಬೇಡಿ ಸ್ಟುಪ್ಪಿಡ್" ಎಂದು ಪ್ರೇಕ್ಷಕರೊಬ್ಬರು ಟ್ವಿಟ್ಟರ್‌ನಲ್ಲಿ ಸುನೀಲ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದರು. ಸುನೀಲ್ ಶೆಟ್ಟಿ ಅವರನ್ನು ಅಜಯ್ ದೇವ್‌ಗನ್ ಎಂದು ಆ ಟ್ವೀಟ್ ಮಾಡಿದವರು ತಪ್ಪಾಗಿ ಭಾವಿಸಿದ್ದರು. ಅದಕ್ಕೆ ಸುನೀಲ್ ಶೆಟ್ಟಿ ಕೂಡ ಉತ್ತರ ನೀಡಿದ್ದು, "ಸಹೋದರ, ನಿಮ್ಮ ಕನ್ನಡಕವನ್ನು ಬದಲಾಯಿಸಿ ಅಥವಾ ಸರಿಯಾಗಿ ಹಾಕಿಕೊಳ್ಳಿ" ಎಂದು ಹೇಳಿದ್ದಾರೆ.
ಕ್ಷಮೆ ಕೇಳಿದ ಪ್ರೇಕ್ಷಕ
ಸುನೀಲ್ ಶೆಟ್ಟಿ ಉತ್ತರ ನೋಡಿ ಆ ಪ್ರೇಕ್ಷಕ ಕ್ಷಮೆ ಕೇಳಿದ್ದಾರೆ. "ಹೆಲೋ, ಸುನೀಲ್ ಶೆಟ್ಟಿ, ಮಿಸ್ ಆಗಿ ಟ್ಯಾಗ್ ಆಗಿತ್ತು. ನಿಮ್ಮನ್ನು ನೋಯಿಸುವ ಉದ್ದೇಶ ನನಗಿಲ್ಲ. ಅಜಯ್ ದೇವ್‌ಗನ್ ಅವರಿಗೆ ನಾನು ಟ್ಯಾಗ್ ಮಾಡಬೇಕಿತ್ತು. ನಾನು ನಿಮ್ಮ ಅಭಿಮಾನಿಯಾಗಿದ್ದಕ್ಕೆ ಟ್ಯಾಗ್ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಮೊದಲು ಬಂದಿತು" ಎಂದು ಹೇಳಿದ್ದರು. ಸುನೀಲ್ ಶೆಟ್ಟಿ ಅವರು ಆ ಪ್ರೇಕ್ಷಕನ ಕ್ಷಮೆಯನ್ನು ಒಪ್ಪಿಕೊಂಡಿದ್ದಾರೆ.
ಅಕ್ಷಯ್ ಕುಮಾರ್ ಕೂಡ ಕ್ಷಮೆ ಕೇಳಿದ್ದರು
"ಎಲ್ಲರಿಗೂ ನಾನು ಕ್ಷಮೆ ಕೇಳುವೆ. ನಿಮ್ಮೆಲ್ಲರ ಪ್ರತಿಕ್ರಿಯೆ ನನ್ನ ಮೇಲೆ ತುಂಬ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆಯನ್ನು ಉತ್ತೇಜಿಸುವುದಿಲ್ಲ. ನಾನು ಪಾನ್ ಮಸಾಲ ಜಾಹೀರಾತಿನ ಜೊತೆ ಕೈಜೋಡಿಸಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಗಳನ್ನು ನಾನು ಗೌರವಿಸುತ್ತೇನೆ. ಮಾನವೀಯತೆ ಕಾರಣದಿಂದ ಈ ಜಾಹೀರಾತಿನಿಂದ ಹಿಂದೆ ಸರಿಯುವೆ. ಇದರಿಂದ ಪಡೆದ ಸಂಭಾವನೆಯನ್ನು ನಾನು ಒಳ್ಳೆಯ ಉದ್ದೇಶಕ್ಕಾಗಿ ಬಳಸುವೆ. ಈಗಾಗಲೇ ಮಾಡಿಕೊಂಡ ಒಪ್ಪಂದದ ಅವಧಿ ಮುಗಿಯುವವರೆಗೂ ಬ್ರ್ಯಾಂಡ್‌ನವರು ಜಾಹೀರಾತು ಪ್ರಸಾರ ಮಾಡಬಹುದು. ಮುಂಬರುವ ದಿನಗಳಲ್ಲಿ ಜಾಹೀರಾತು ಆಯ್ಕೆ ಮಾಡಿಕೊಳ್ಳುವಾಗ ಮುನ್ನಚ್ಚೆರಿಕೆ ವಹಿಸುವೆ" ಎಂದು ಅಕ್ಷಯ್ ಕುಮಾರ್ ( ಂಞshಚಿಥಿ ಏumಚಿಡಿ ) ಅವರು ಕ್ಷಮೆ ಕೇಳಿದ್ದರು.