ಕುಂಬಳೆ: ದೈವ ದೇವಸ್ಥಾನಗಳಂತಹ ಧಾರ್ಮಿಕ ಶ್ರದ್ಧಾ ಕೇಂದ್ರದಲ್ಲಿ ಒಗ್ಗಟ್ಟು ಹಾಗೂ ಒಲವು ಇದ್ದರೆ ನಾಡಿನಾದ್ಯಂತ ಅದರ ಪರಿಣಾಮ ಮೂಡಬಲ್ಲುದು. ಇದರಿಂದಾಗಿ ಪ್ರತಿ ಮನೆ ಮನಗಳು ಊರು ಸದಾ ಸಂಪತ್ಭರಿತವಾಗಿರಲು ಸಾಧ್ಯ. ಎಂದು ಮಲಬಾರ್ ದೇವಸ್ಬಂ ಬೋರ್ಡಿನ ಸದಸ್ಯ ಎಂ. ಶಂಕರ ರೈ ಮಾಸ್ತರ್ ಅಭಿಪ್ರಾಯಪಟ್ಟರು.
ಅವರು ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪಂಚಮ ದಿನವಾದ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದರು.
ನಮ್ಮ ಮನೆ,ಕುಟುಂಬ, ಗ್ರಾಮದ ದೇಗಲ ಅಲ್ಲಿನ ಶ್ರದ್ಧಾ ಭಕ್ತಿಯ ಆರಾಧನೆಗಳು ಸಾಂಗವಾಗಿ ನೇರೆವೇರಿದರೆ ಮಾತ್ರ ದೇವರು ಸದಾ ಅನುಗ್ರಹಿತನಾಗಿರಲು ಸಾಧ್ಯ.ಆದ್ದರಿಂದ ಬ್ರಹ್ಮಕಲಶ ನಡೆದ ಬಳಿಕ ಆರಾಧನೆ ಹಾಗೂ ಆಡಳಿತರೂಢ ಕಾರ್ಯಗಳು ಸದಾ ಜಾಗೃತವಾಗಿರಬೇಕು ಎಂದರು.
ಕೇರಳ ಗ್ರಾಮೀಣ ಬ್ಯಾಂಕ್ ನಿವೃತ್ತ ಅಧ್ಯಕ್ಷ ಕೆ.ಶಿವರಾಮ ಶೆಟ್ಟಿ ಕುದ್ರೆಪ್ಪಾಡಿ ಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುರೇಶ್ ಕೆ. ಕಾಸರಗೋಡು, ರಾಮಕೃಷ್ಣ ಆಳ್ವ ಕೆ.ಎಸ್.ಕೂಡ್ಲು,ಎಂ.ಸಂಜೀವ ರೈ ಮಾಯಿಪ್ಪಾಡಿ ಗುತ್ತು, ರಾಮಪ್ಪ ಮಂಜೇಶ್ವರ, ಮನೋಜ್ ವಿ.ಎಂ, ಬಾಬು ಸಿದ್ದಿಬೈಲು,ಸತೀಶ್ ರಾವ್ ಎಡನೀರು, ಪತ್ರಕರ್ತ ಕೆ.ಸುಬ್ಬಣ್ಣ ಶೆಟ್ಟಿ ಕಾಸರಗೋಡು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ,ಪ್ರಧಾನ ಕಾರ್ಯದರ್ಶಿಗಳಾದ ಸುಕುಮಾರ ಕುದ್ರೆಪ್ಪಾಡಿ,ಆಶೋಕ್ ರೈ ಮಾಯಿಪ್ಪಾಡಿ ಗುತ್ತು ವಿಶಾಲಾಕ್ಷ ಪುತ್ರಕಳ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು ಜೀರ್ಣೋದ್ಧಾರ ಸಮಿತಿ ಕಾರ್ಯಧ್ಯಕ್ಷ ಕೆ.ರಘನಾಥ ಶೆಟ್ಟಿ ಕುದ್ರೆಪ್ಪಾಡಿ ಗುತ್ತು ಸ್ವಾಗತಿಸಿ ಸಿ.ಎಚ್.ಪರಮೇಶ್ವರ ಹೆಬ್ಬಾರ್ ವಂದಿಸಿದರು.