ಜಮ್ಮು: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ಜಮ್ಮುವಿನ ಆರ್.ಎಸ್.ಪುರ ವಲಯದ ಅಂತರರಾಷ್ಟ್ರೀಯ ಗಡಿ ಬಳಿ ಶನಿವಾರ ಪಾಕಿಸ್ತಾನದ ಡ್ರೋನ್‌ವೊಂದನ್ನು ಗುರುತಿಸಿದ್ದು, ಗುಂಡಿನ ದಾಳಿ ನಡೆಸಿ ಹಿಂದಕ್ಕಟ್ಟಿದೆ.
ಜಮ್ಮು: ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯು ಜಮ್ಮುವಿನ ಆರ್.ಎಸ್.ಪುರ ವಲಯದ ಅಂತರರಾಷ್ಟ್ರೀಯ ಗಡಿ ಬಳಿ ಶನಿವಾರ ಪಾಕಿಸ್ತಾನದ ಡ್ರೋನ್‌ವೊಂದನ್ನು ಗುರುತಿಸಿದ್ದು, ಗುಂಡಿನ ದಾಳಿ ನಡೆಸಿ ಹಿಂದಕ್ಕಟ್ಟಿದೆ.
'ಆರ್.ಎಸ್ ಪುರದ ಅರ್ನಿಯಾ ಸೆಕ್ಟರ್‌ನಲ್ಲಿರುವ ಅಂತರರಾಷ್ಟ್ರೀಯ ಗಡಿಯ ಬಳಿ ಇಂದು ಮುಂಜಾನೆ 4.45ರ ಸುಮಾರಿನಲ್ಲಿ ಪಾಕ್ ಕಡೆಯಿಂದ ಡ್ರೋನ್‌ವೊಂದು ಭಾರತದತ್ತ ಬರುತ್ತಿದ್ದದ್ದನ್ನು ಸೈನಿಕರು ಪತ್ತೆ ಮಾಡಿದ್ದರು' ಎಂದು ಬಿಎಸ್‌ಎಫ್ ಮೂಲಗಳು ಹೇಳಿವೆ.
'ಡ್ರೋನ್‌ನತ್ತ ಏಳರಿಂದ ಎಂಟು ಸುತ್ತು ಗುಂಡುಗಳನ್ನು ಹಾರಿಸಲಾಯಿತು.
ಮೇ 7 ರಂದು ಕೂಡ, ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ಬರುತ್ತಿದ್ದ ಡ್ರೋನ್‌ವೊಂದನ್ನು ಬಿಎಸ್‌ಎಫ್ ಪಡೆ ಗುಂಡು ಹೊಡೆದು ಹಿಮ್ಮೆಟ್ಟಿಸಿತ್ತು.
ಮೇ 9ರಂದು ಪಂಜಾಬ್‌ನ ಅಮೃತಸರದ ಅಂತರಾಷ್ಟ್ರೀಯ ಗಡಿಯ ಸಮೀಪ 10 ಕೆ.ಜಿ.ಯಷ್ಟು ಹೆರಾಯಿನ್ ಹೊತ್ತು ಬರುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಬಿಎಸ್‌ಎಫ್ ಪಡೆ ಹೊಡೆದುರುಳಿಸಿತ್ತು.