ನವದೆಹಲಿ: ದೇಶದ್ರೋಹದ ಕಾನೂನನ್ನು ಮರುಪರಿಶೀಲನೆವರೆಗೂ ಈ ಕಾನೂನಿನ ಅಡಿಯಲ್ಲಿ ಬಾಕಿ ಇರುವ ಪ್ರಕರಣಗಳು ಏನಾಗಲಿವೆ? ಭವಿಷ್ಯದಲ್ಲಿ ಅಂತಹ ಪ್ರಕರಣಗಳನ್ನು ಏನು ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಸೆಕ್ಷನ್ 124ಎ (ದೇಶ ದ್ರೋಹದ ಕಾನೂನು)ನ ಸಿಂಧುತ್ವವನ್ನು ಪರಿಶೀಲಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿತ್ತು.
ಬಾಕಿ ಉಳಿದಿರುವ ಪ್ರಕರಣಗಳು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಪ್ರಕರಣಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೋರ್ಟ್ ಸಾಲಿಸಿಟರ್ ಜನರಲ್ ಗೆ ಹೇಳಿದ್ದು, ಈ ವಿಷಯವನ್ನು ಮೇ.11 ಕ್ಕೆ ಮುಂದೂಡಿದೆ.