ಕಾಸರಗೋಡು: ಪೆರಿಯ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ 24ಮಂದಿ ಆರೋಪಿಗಳು ಮೇ 17ರಂದು ಎರ್ನಾಕುಳಂನ ಸಿಬಿಐ ನ್ಯಾಯಾಲಯದಲ್ಲಿ ಹಾಜರಾಗುವಂತೆ ನ್ಯಾಯಾಲಯ ಆದೇಶಿಸಿದೆ. ಪೆರಿಯ ಅವಳಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.
2019 ಫೆ. 17ರಂದು ಸಂಜೆ ಯುವಕಾಂಗ್ರೆಸ್ ಕಾರ್ಯಕರ್ತರಾದ ಶರತ್‍ಲಾಲ್ ಮತ್ತು ಕೃಪೇಶ್ ಅವರನ್ನು ತಂಡವೊಂದು ಬರ್ಬರವಾಗಿ ಕೊಲೆಗೈದಿದ್ದು, ಮೊದಲು ಸ್ಥಳೀಯ ಪೊಲೀಸ್, ನಂತರ ಕ್ರೈಂ ಬ್ರಾಂಚ್ ತನಿಖೆ ನಡೆಸಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡುವಂತೆ ಕೊಲೆಗೀಡಾದ ಯುವಕರ ಹೆತ್ತವರು ಹೈಕೋರ್ಟಿಗೆ ಮನವಿ ಸಲ್ಲಿಸಿದ್ದರು. ಸಿಬಿಐ ತನಿಖೆಗೆ ಹೈಕೋರ್ಟು ಹಸಿರುನಿಶಾನಿ ತೋರಿಸುತ್ತಿದ್ದಂತೆ, ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಿಗೆ ಅಪೀಲು ಸಲ್ಲಿಸಿದರೂ, ಅರ್ಜಿ ತಿರಸ್ಕರಿಸುವ ಮೂಲಕ ಕೊನೆಗೂ ಪ್ರಕರಣ ಸಿಬಿಐಗೆ ವಹಿಸಿಕೊಡಲಾಗಿದೆ. ಸಿಪಿಎಂ ಮುಖಂಡರಾದ ಕೆ.ವಿ ಕುಞÂರಾಂನ್, ಕೆ. ಮಣಿಕಂಠನ್ ಸೇರಿದಂತೆ ಹಲವರು ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.