ಎಲ್ಲರಿಗೂ ಒಂದಲ್ಲಾ ಒಂದು ಸಮಯದಲ್ಲಿ ತಲೆನೋವಿನ ಅನುಭವ ಆಗಿರುತ್ತದೆ. ತಲೆನೋವು ಹೇಗಿರುತ್ತದೆ ಎಂದು ಗೊತ್ತೇ ಇಲ್ಲ ಎಂದು ಹೇಳುವವರು ಯಾರೂ ಇರಲ್ಲ. ಅಪರೂಪಕ್ಕೆ ತಲೆನೋವು ಬರುವುದು ಸಹಜ. ಶೀತವಾದಾಗ, ಜ್ವರ ಬಂದಾಗ ಅಥವಾ ಏನೋ ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆ ಉಂಟಾದಾಗ ತಲೆನೋವು ಕಾಡುವುದು ಸಹಜ. ಆದರೆ ಕೆಲವರಿಗೆ ಆಗಾಗ ತಲೆನೋವು ಉಂಟಾಗುತ್ತಿರುತ್ತದೆ, ಈ ರೀತಿಯ ತಲೆನೋವು ನಿರ್ಲಕ್ಷ್ಯ ಮಾಡಲೇಬಾರದು, ಏಕೆಂದರೆ ಅದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿದೆ.
ನಿಮಗೆ ಪದೇ-ಪದೇ ತಲೆನೋವು ಉಂಟಾಗುತ್ತಿದ್ದರೆ ಇವುಗಳಲ್ಲಿ ಒಂದು ಕಾರಣವಾಗಿರಬಹುದು, ಸೂಕ್ತ ತಜ್ಞರನ್ನು ಕಂಡು ನಿಮ್ಮನ್ನು ಕಾಡುವ ತಲೆನೋವಿಗೆ ಕಾರಣವೇನು ಎಂಬುವುದನ್ನು ತಿಳಿದುಕೊಳ್ಳಿ:
ಮಾನಸಿಕ ಒತ್ತಡ
ತುಂಬಾ ಮಾನಸಿಕ ಒತ್ತಡವಿದ್ದರೆ ತಲೆನೋವು ಕಾಡುವುದು ಸಹಜ. ಮಾನಸಿಕ ಒತ್ತಡವಿದ್ದರೆ ತುಂಬಾ ಇದ್ದರೆ ನಿಮ್ಮ ತಲೆನೋವಿಗೆ ಕಾರಣವೇನು ಎಂಬುವುದು ನಿಮಗೆ ತಿಳಿದಿರುತ್ತದೆ. ನೀವು ತಲೆನೋವಿಗೆ ಔಷಧಿಗೆ ಸೇವಿಸಿದರೆ ಆ ಕ್ಷಣಕ್ಕೆ ಅಷ್ಟೇ ಕಡಿಮೆಯಾಗಿ ಪದೇ ಪದೇ ಮರುಕಳಿಸುತ್ತಾ ಇರುತ್ತದೆ.
ಮಾನಸಿಕ ಒತ್ತಡದಿಂದ ತಲೆನೋವು ಉಂಟಾಗುತ್ತಿದ್ದರೆ ನಿಮ್ಮ ತಲೆನೋವು ಕಡಿಮೆಯಾಗಲು ಮಾನಸಿಕ ಒತ್ತಡ ಕಡಿಮೆಮಾಡಿಕೊಳ್ಳುವ ಮಾರ್ಗ ಕಂಡುಕೊಳ್ಳಿ. ಯೋಗ, ಪ್ರಾಣಯಾಮ, ಧ್ಯಾನ, ವಿಶ್ರಾಂತಿಗೆ ಒಂದು ಟ್ರಿಪ್ ಹೋಗುವುದು ಹೀಗೆ ನಿಮ್ಮ ವಿಶ್ರಾಂತಿಗೆ ಹೆಚ್ಚು ಗಮನ ನೀಡಿ. ಆಗ ತಲೆನೋವು ಅಟೋಮ್ಯಾಟಿಕ್ ಕಡಿಮೆಯಾಗುವುದು.
ಸೈನಸೈಟಿಸ್/ಸೈನಸ್
ಸೈನಸೈಟಿಸ್ ಸೋಂಕು ಪದೇ ಪದೇ ತಲೆನೋವಿಗೆ ಕಾರಣವಾಗುವ ಒಂದು ಸಾಮಾನ್ಯ ಅಂಶವಾಗಿದೆ. ತಲೆನೋವು, ಕಣ್ಣಿನ ಸುತ್ತ, ಕೆನ್ನೆ, ತಲೆ ನೋವು ಇವೆಲ್ಲಾ ಸೈನಸೈಟಿಸ್‌ನ ಸಾಮಾನ್ಯ ಲಕ್ಷಣವಾಗಿದೆ.
ಬ್ರೈನ್ ಟ್ಯೂಮರ್ (ಮೆದುಳಿನಲ್ಲಿ ಗೆಡ್ಡೆ)
ಬ್ರೈನ್ ಟ್ಯೂಮರ್ ಇದ್ದರೆ ಆಗಾಗ ತುಂಬಾ ತಲೆನೋವು ಕಾಡುತ್ತಿರುತ್ತದೆ. ಯಾವಾಗ ಮೆದುಳಿನಲ್ಲಿ ಗೆಡ್ಡೆ ಬೆಳೆಯಲಾರಂಭಿಸಿತ್ತೋ ಆಗ ತುಂಬಾ ತಲೆನೋವು ಉಂಟಾಗುವುದು. ನೀವು ಪದೇ ಪದೇ ತಲೆನೋವು ಕಾಡುತ್ತಿದ್ದರೆ ಒಮ್ಮೆ ಮೆದುಳಿನ ಸ್ಕ್ಯಾನಿಂಗ್ ಮಾಡಿಸಿ.
ನಿರ್ಜಲೀಕರಣ (Dehydration)
ದೇಹದಲ್ಲಿ ನೀರಿನಂಶ ತುಂಬಾ ಕಡಿಮೆಯಾದರೆ ತಲೆನೋವಿನ ಸಮಸ್ಯೆ ಕಾಡಲಾರಂಭಿಸುತ್ತೆ. ನೀವು ಸಾಕಷ್ಟು ಪ್ರಮಾಣದಲ್ಲಿ ಕುಡಿಯದಿದ್ದರೆ ರಕ್ತನಾಳಗಳನ್ನು ಕಿರಿದಾಗಿಸುತ್ತೆ, ಇದರಿಂದ ಕೂಡ ತಲೆನೋವಿನ ಸಮಸ್ಯೆ ಉಂಟಾಗುವುದು. ದಿನದಲ್ಲಿ ಕಡಿಮೆಯೆಂದರೂ 8 ಲೋಟ ನೀರು ಕುಡಿಯಿರಿ.
ಮೆಗ್ನಿಷ್ಯಿಯಂ ಕೊರತೆ
ಯಾರಲ್ಲಿ ಮೆಗ್ನಿಷ್ಯಿಯಂ ಕೊರತೆ ಇರುತ್ತದೆಯೋ ಅವರಿಗೆ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿರುತ್ತದೆ. ತುಂಬಾ ಧೂಮಪಾನ ಮಾಡುವುದು, ಕಡಿಮೆ ನಿದ್ದೆ, ಫ್ಲೂ, ಕಣ್ಣು ಹಾಗೂ ಕುತ್ತಿಗೆಗೆ ಹೆಚ್ಚು ಒತ್ತಡ ಬೀಳುವುದು ಇವುಗಳಿಂದಲೂ ತಲೆನೋವಿನ ಸಮಸ್ಯೆ ಉಂಟಾಗುವುದು.
ಗಂಭೀರ ಕಾಯಿಲೆ
ಫೈಬ್ರೊಮ್ಯಾಲ್ಗಿಯ, ಲೂಪಸ್ ಮತ್ತು ಮಧುಮೇಹ ಮುಂತಾದ ಆರೋಗ್ಯ ಸಮಸ್ಯೆಯಿದ್ದರೆ ತಲೆನೋವು ಉಂಟಾಗುವುದು. ಗಂಭೀರ ಆರೋಗ್ಯ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದರ ಅಡ್ಡಪರಿಣಾಮದಿಂದಲೂ ತಲೆನೋವು ಕಂಡು ಬರುವುದು
ತಲೆಗೆ ಪೆಟ್ಟಾಗಿ ತಲೆನೋವು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ
ಆಕ್ಸಿಡೆಂಟ್ ಆದಾಗ ಅಥವಾ ಬಿದ್ದಾಗ ಹೊರಗಡೆ ಗಾಯವೇನೂ ಆಗದೆ ನೀವು ಆರಾಮವಾಗಿಯೇ ಇದ್ದರೂ ಕೆಲ ದಿನಗಳ ನಂತರ ತಲೆನೋವು ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಅದು ನಿಮ್ಮ ತಲೆಯೊಳಗೆ ಪೆಟ್ಟಾಗಿದೆ ಎಂಬುವುದರ ಲಕ್ಷಣವಾಗಿದೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿರುತ್ತದೆ ಅಥವಾ ಮೆದುಳಿಗೆ ಹಾನಿಯಾಗಿರುತ್ತದೆ ಆದ್ದರಿಂದ ನಿರ್ಲಕ್ಷ್ಯ ಮಾಡಬೇಡಿ, ಸ್ಕ್ಯಾನಿಂಗ್ ಮಾಡಿಸಿ. ನಿರ್ಲಕ್ಷ್ಯ ಮಾಡಿದರೆ ಸಾವು ಸಂಭವಿಸಬಹುದು.