ಕಾಸರಗೋಡು: ನಗರಸಭಾ ವ್ಯಾಪ್ತಿಯ ಆಟೋರಿಕ್ಷಾಗಳಲ್ಲಿ ಜೂ.1ರಿಂದ ಮೀಟರ್ ಕಡ್ಡಾಯಗೊಳಿಸುವಂತೆ ಹಾಗೂ ಆಟೋದಲ್ಲಿ ಬಾಡಿಗೆದರ ಪಟ್ಟಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾಸರಗೋಡು ತಾಲೂಕು ಅಭಿವೃದ್ಧಿ ಸಮಿತಿ ಸಭೆಯು ಆರ್ ಟಿಒಗೆ ನಿರ್ದೇಶನ ನೀಡಿದೆ.
ಕಾಸರಗೋಡು ಸರ್ಕಾರಿ ಶಾಲೆಯಲ್ಲಿರುವ ಜಾಗದ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಪ್ರಸಕ್ತ 500 ವಿದ್ಯಾರ್ಥಿಗಳಿದ್ದು, ಹೊಸ ಶೈಕ್ಷಣಿಕ ವರ್ಷದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದರಿಂದ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದ್ದು, ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆಯೂ ಸಭೆ ಅಗ್ರಹಿಸಿತು.
ಕಾಸರಗೋಡು ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಯೋಗ ಮಂದಿರದ ಮೇಲ್ಭಾಗ ಅಪಾಯದಲ್ಲಿರುವ ಮರವನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಮುಖ್ಯ ವೈದ್ಯಾಧಿಕಾರಿಗೆ ಸೂಚಿಸಲಾಯಿತು.
ಚೆರ್ಕಳದ ಸÀರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಜಾಗ ಸೀಮಿತವಾಗಿರುವುದರಿಂದ ಶಾಲೆಯ ಸಮೀಪವಿರುವ ಸರ್ಕಾರಿ ಜಮೀನು ಸರ್ವೆ ಮಾಡಿ ಶಾಲೆಗೆ ಹಸ್ತಾಂತರಿಸಲು ಕೂಡಲೇ ಕ್ರಮಕೈಗೊಳ್ಳಬೇಕು ಎಂದೂ ಸಭೆಯಲ್ಲಿ ಒತ್ತಾಯಿಸಲಾಯಿತು.
ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಮೊಗ್ರಾಲ್‍ಪುತ್ತೂರು ಗ್ರಾಪಂ ಅಧ್ಯಕ್ಷೆ ಟಿ.ಕೆ.ಶಮೀರ, ಬದಿಯಡ್ಕ ಗ್ರಾಪಂ ಅಧ್ಯಕ್ಷೆ ಬಿ.ಶಾಂತಕುಮಾರಿ, ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸಲಿಗೆ, ಭೂರೇಖಾ ತಹಸೀಲ್ದಾರ್ ಮಂಜುಷಾ ವಿ.ಎಸ್., ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.