ತ್ರಿಶೂರ್: ಎರ್ನಾಕುಳಂನ ಮಹಾಲಕ್ಷ್ಮಿ ಅನೂಪ್ ಅವರು ಗುರುವಾಯೂರಪ್ಪನ ಮಣ್ಣಿನಲ್ಲಿ ತಮ್ಮ ಧಾರ್ಮಿಕ ಸಾಂಸ್ಕøತಿಕ ಸೇವೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸಿದರು. ವೈಶಾಖಮಾಸದ ಅಂಗವಾಗಿ ಗುರುವಾಯೂರು ಮೇಲ್ಪತ್ತೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾಲಕ್ಷ್ಮಿ ಮೋಹಿನಿಯಾಟ್ಟಂ ನೃತ್ಯ ಪ್ರದರ್ಶನ ಕಾರ್ಯಕ್ರಮ ನಡೆಸಿಕೊಟ್ಟರು.
ತಂಜಾವೂರು ಶಂಕರ ಅಯ್ಯರ್ ವಿರಚಿತ ಮಹಾದೇವ ಶಿವ ಶಂಬೋ ಎಂಬ ರೇವತಿ ರಾಗದ ಪದವನ್ನೂ, ಸಾರಮತಿ ರಾಗದ ವರ್ಣವು, ಮೋಹಿನಿಯಾಟ ಕಚೇರಿಯೂ ಪ್ರದರ್ಶನಗೊಂಡಿತು. ಗೋಷ್ಠಿಯಲ್ಲಿ ಖ್ಯಾತ ಕವಯಿತ್ರಿ ಸುಗತಕುಮಾರಿ ಅವರ ‘ನೀನು ಗೊತ್ತಿಲ್ಲ ಕೃಷ್ಣಾ’ ಕವನದ ನೃತ್ಯ ಪ್ರದರ್ಶನ ಅಪೂರ್ವ ಅನುಭವ ನೀಡಿತು. ಸ್ವಾತಿ ತಿರುನಾಳ್ ರಚಿಸಿದ ಧನಶ್ರೀ ತಿಲ್ಲಾನದೊಂದಿಗೆ ಪ್ರದರ್ಶನ ಸಂಪನ್ನಗೊಂಡಿತು.
ಮಹಾಲಕ್ಷ್ಮಿಯ ಗುರು ಪದ್ಮಶ್ರೀ ಕಲಾಮಂಡಲಂ ಕ್ಷೇಮಾವತಿ ಎಂಬವರು. ವಿದೇಶದಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಮಂಜುಘೋಷ ಮೋಹಿನಿಯಾಟ್ಟಕಳರಿಯ ನಿರ್ದೇಶಕಿಯೂ ಆಗಿರುವ ಮಹಾಲಕ್ಷ್ಮಿ ಈಗಾಗಲೇ ದೇಶದ ಹಲವು ಪ್ರಮುಖ ವೇದಿಕೆಗಳಲ್ಲಿ ಮೋಹಿನಿಯಾಟ್ಟಂ ಪ್ರದರ್ಶಿಸಿದ್ದಾರೆ. ಜೆಎಸ್‍ಡಬ್ಲ್ಯೂ ಸ್ಟೀಲ್ಸ್‍ನ ಮುಖ್ಯ ಮಾರುಕಟ್ಟೆ ಅಧಿಕಾರಿ ಅನೂಪ್ ನಾಯರ್ ಅವರು ಮಹಾಲಕ್ಷ್ಮೀಯವರ ಪತಿ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.