ತಿರುವನಂತಪುರ: ವಿಸ್ಮಯಾ ಪ್ರಕರಣದಲ್ಲಿ ಕಿರಣ್ ಕುಮಾರ್ ಗೆ ಶಿಕ್ಷೆ ವಿಧಿಸಿರುವ ಕುರಿತು ಮಹಿಳಾ ಆಯೋಗ ಪ್ರತಿಕ್ರಿಯೆ ನೀಡಿದೆ. ಅಪರಿಚಿತರ ಬೆವರನ್ನು ವರದಕ್ಷಿಣೆಯಾಗಿ ಕೊಂಡು ಐಷಾರಾಮಿ ಜೀವನ ನಡೆಸಬಹುದು ಎಂದುಕೊಂಡಿರುವ ವಿದ್ಯಾವಂತ ಯುವಕರಿಗೆ ನ್ಯಾಯಾಲಯದ ತೀರ್ಪು ಪ್ರಬಲ ಎಚ್ಚರಿಕೆಯಾಗಿದೆ ಎಂದು ಆಯೋಗದ ಅಧ್ಯಕ್ಷೆ ಸತಿದೇವಿ ಹೇಳಿರುವರು.
ಯಾವುದೇ ಕಾರಣಕ್ಕೂ ವರದಕ್ಷಿಣೆ ಪಡೆದು ಮದುವೆಯಾಗುವುದಿಲ್ಲ ಎಂಬ ಪ್ರತಿಜ್ಞೆಯನ್ನು ಈಡೇರಿಸಲು ಯುವಕರು ಸಿದ್ಧರಾಗಬೇಕು. ವಿದ್ಯಾವಂತ ಯುವಕರು ವರದಕ್ಷಿಣೆ ವಿರುದ್ಧ ಕೈಗೊಂಡಿರುವ ಪ್ರತಿಜ್ಞೆಯನ್ನು ಕಾಲೇಜು ಬಿಡುವಾಗ ಮರೆಯಬಾರದು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ತಿಳಿಸಿದರು.
ಪಾಲಕರು ಹೆಣ್ಣುಮಕ್ಕಳನ್ನು ಹೊಣೆಗಾರಿಕೆಯಾಗಿ ನೋಡುವ ದೃಷ್ಟಿಕೋನವನ್ನು ಬದಲಿಸಿ ಯಾರದ್ದೋ ತಲೆಗೆ ಹಾಕಿಕೊಳ್ಳುವುದು ನಿಲ್ಲಬೇಕು. ಹೆಣ್ಣುಮಕ್ಕಳಿಗೆ ಎಲ್ಲ ನಾಗರಿಕ ಹಕ್ಕುಗಳಿವೆ ಎಂಬುದನ್ನು ಪಾಲಕರು ಗುರುತಿಸಬೇಕು. ಸಮಾಜದಲ್ಲಿ ಹುಡುಗಿಯರು ಮತ್ತು ಹುಡುಗರು ಪರಸ್ಪರ ಅರಿತು ಸಮಾನತೆಯ ವಾತಾವರಣದೊಂದಿಗೆ ಬೆಳೆಯುವುದು ಅತ್ಯಗತ್ಯ ಎಂದು ಸತಿದೇವಿ ಪ್ರತಿಕ್ರಿಯಿಸಿದರು.