ಕಾಶಿ: ವಾರಾಣಸಿಯ ಜ್ಞಾನವ್ಯಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಾಫಿ ಸಮೀಕ್ಷೆಗೆ ನೇಮಕ ಮಾಡಲಾಗಿದ್ದ ಆಯೋಗ ವಿಡಿಯೋಗ್ರಫಿಯ ಸಮೀಕ್ಷೆಯ ವರದಿಯನ್ನು ಕೋರ್ಟ್ ಗೆ ಸಲ್ಲಿಸುವುದಕ್ಕೆ ಹೆಚ್ಚಿನ ಕಾಲಾವಕಾಶ ಕೇಳಲು ನಿರ್ಧರಿಸಿದ್ದಾರೆ.
ವರದಿ ಸಿದ್ಧತೆ ಇನ್ನೂ ಪೂರ್ಣಗೊಳ್ಳದೇ ಇರುವುದು ಹೆಚ್ಚಿನ ಕಾಲಾವಕಾಶ ಕೇಳಲು ಇರುವ ಮುಖ್ಯ ಕಾರಣವಾಗಿದೆ. ಮಂಗಳವಾರ (ಮೇ.17 ರಂದು) ವರದಿ ಸಲ್ಲಿಸುವಂತೆ ಆಯೋಗಕ್ಕೆ ಕೋರ್ಟ್ ಗಡುವು ವಿಧಿಸಿತ್ತು.
ಸಹಾಯಕ ಅಡ್ವೊಕೇಟ್ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಮಾತನಾಡಿದ್ದು, ಕೋರ್ಟ್ ಆದೇಶದ ಪ್ರಕಾರ ಜ್ಞಾನವ್ಯಾಪಿ ಮಸೀದಿಯ ವಿಡಿಯೋಗ್ರಫಿ ಸಮೀಕ್ಷೆ ಮೇ.14 ರಿಂದ ಮೇ.16 ವರೆಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆ ವರೆಗೆ ನಡೆದಿದೆ. ಈ ವರದಿಯನ್ನು ಕೋರ್ಟ್ ಗೆ ಸಲ್ಲಿಸಬೇಕಿತ್ತು. ಆದರೆ ವರದಿ ಸಂಪೂರ್ಣವಾಗಿ ಸಿದ್ಧವಿಲ್ಲದ ಕಾರಣ ಕೋರ್ಟ್ ಹೇಳಿದ ದಿನದಂದು ನಾವು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ನ್ಯಾಯಾಲಯದಲ್ಲಿ ಹೆಚ್ಚಿನ ಕಾಲಾವಕಾಶ ಕೋರಲಿದ್ದೇವೆ" ಎಂದು ತಿಳಿಸಿದ್ದಾರೆ.