ಬದಿಯಡ್ಕ: ಸೇವಾಭಾರತಿ ಚೆಂಗಳ ಪಂಚಾಯತಿ ಸಮಿತಿಯ ನೂತನ ಕಾರ್ಯಾಲಯದ ಉದ್ಘಾಟನೆಯನ್ನು ನಿವೃತ್ತ ಐ ಎ ಎಸ್ ಅಧಿಕಾರಿ ಗೋಪಾಲಕೃಷ್ಣ ಇತ್ತೀಚೆಗೆ ನಿರ್ವಹಿಸಿದರು. ಈ ಸಂದರ್ಭ ಹಲವಾರು ಬಡ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಣೆ ನಡೆಸಲಾಯಿತು. ಸೇವಾಭಾರತಿ ಜಿಲ್ಲಾ ಅಧ್ಯಕ್ಷ ದಿನೇಶ್.ಎಂ.ಟಿ , ಆರ್ ಎಸ್ ಎಸ್ ಕಾಸರಗೋಡು ತಾಲೂಕು ಸಹಕಾರ್ಯವಾಹ ಸುನಿಲ್ ಕುದ್ರೆಪ್ಪಾಡಿ, ತೇಜಸ್ವಿ ಹೇರಳ, ಜಯಚಂದ್ರನ್ ಪೈಕ, ಅನಿಲ್ ಚಿಂತಣಿ, ಹರೀಶ್ ನಾರಂಪಾಡಿ, ಪಿ ಆರ್ ಸುನಿಲ್, ರಮೇಶ್ ಮಾವಿನಕಟ್ಟೆ, ಕುಞಂಬು ಮಾಸ್ತರ್ ಉಪಸ್ಥಿತರಿದ್ದರು.