ಪಾಲಕ್ಕಾಡ್: ಟ್ರಕ್ಕಿಂಗ್ ಗೆ ತೆರಳಿ ಮರಳುವಾಗ ಕೊರಕಲುಗಳಿಗೆ ಬಿದ್ದು, ಸಿಲುಕಿ ಸುದ್ದಿಯಾಗಿ ಬಳಿಕ ಸೇನೆಯಿಂದ ರಕ್ಷಿಸಲ್ಪಟ್ಟ ಬಾಬು ಸುದ್ದಿಯಾಗಿದ್ದರು. ಆಗ ಜನರು ಕೇರಳ ಕಂಡ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆಗೆ ಸಾಕ್ಷಿಯಾದರು. ಆದರೆ ಇದೀಗ ಬಾಬು ಅವರ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾ ನೆಲದ ಮೇಲೆ ಉರುಳಾಡುತ್ತಿರುವ ವಿಡಿಯೋ ಇದಾಗಿದೆ. ವಿಡಿಯೋದುದ್ದಕ್ಕೂ ಬಾಬು ತುಂಬಾ ನೊಂದುಕೊಂಡಂತಿದೆ.
ಬಾಬು ನನಗೆ ಸಾಯಬೇಕು....ಸಾಯಬೇಕು ಎಂದು ಬೊಬ್ಬಿರಿದಿರುವುದು ವೀಡಿಯೋದಲ್ಲಿದೆ. ಸ್ನೇಹಿತರು ತಲೆಗೆ ನೀರು ಸುರಿದು ಮನವೊಲಿಸಲು ಯತ್ನಿಸುತ್ತಿರುವುದು ಹಾಗೂ ಬಾಬು ತನ್ನ ತಾಯಿ ಹಾಗೂ ಸ್ನೇಹಿತರ ಜತೆ ಜೋರಾಗಿ ಮಾತನಾಡುತ್ತಿರುವುದು ವಿಡಿಯೋದಲ್ಲಿದೆ. ತನ್ನ ಮನವೊಲಿಸಲು ಯತ್ನಿಸುತ್ತಿದ್ದ ತನ್ನ ತಾಯಿಯನ್ನೂ ಅವಮಾನಿಸಿದ್ದಾನೆ ಎನ್ನಲಾಗಿದೆ.
ಆದರೆ, ಆತನ ಸ್ನೇಹಿತರು ವಿಡಿಯೋವನ್ನು ನಕಲು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬಾಬುವಿನ ಮಾನಹಾನಿ ಮಾಡಿದ್ದಾರೆ ಎಂದು ಬಾಬು ಸಹೋದರ ಶಾಜಿ ಹೇಳಿದ್ದಾರೆ. ಕೊರಕಲಲ್ಲಿ ಸಿಲುಕಿದ ಘಟನೆಯ ಬಳಿಕ ಬಾಬು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ವೈದ್ಯರು ಒಂದು ವಾರ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಆದರೆ ಸಾಕಷ್ಟು ವಿಶ್ರಾಂತಿ ಸಿಗದ ಕಾರಣ ಬಾಬು ಮಾನಸಿಕವಾಗಿ ನಲುಗಿ ಹೋಗಿದ್ದನು ಎನ್ನಲಾಗಿದೆ.
ಟ್ರೆಕ್ಕಿಂಗ್ ಅಪಘಾತದ ನಂತರ ಬಾಬು ಅವರನ್ನು ಸ್ನೇಹಿತರು ಚುಡಾಯಿಸಿದ್ದಾರೆ ಎಂದು ಶಾಜಿ ಹೇಳಿದ್ದಾರೆ. ಬಾಬು ಹಣ ಪಡೆದಿರುವುದಾಗಿ ಹೇಳಿ ಬಾಬುಗೆ ಹಣಕ್ಕಾಗಿ ಪೀಡಿಸಿದ್ದರು. ಬಾಬು ಅವರನ್ನು ಕೆಟ್ಟದಾಗಿ ಚಿತ್ರಿಸಲು ಆತನ ಸ್ನೇಹಿತರು ಯತ್ನಿಸಿದ್ದಾರೆ ಎಂದು ಶಾಜಿ ಆರೋಪಿಸಿದ್ದಾರೆ. ಬಾಬು ಗಾಂಜಾ ಚಟ ಅಂಟಿಸಿಕೊಂಡಿದ್ದಾನೆ ಎಂಬ ಅಪಪ್ರಚಾರವೂ ಇದೆ. ಆದರೆ, ತನ್ನ ಮಗ ಗಾಂಜಾ ಸೇವಿಸಿಲ್ಲ, ಸಹೋದರನೊಂದಿಗೆ ಉಂಟಾದ ಮನಸ್ಥಾಪದ ಗಲಾಟೆ ಅದು ಎಂದು ಬಾಬು ಅವರ ತಾಯಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.