ನವದೆಹಲಿ : ಕಾಂಗ್ರೆಸ್ ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಪಿಲ್ ಸಿಬಲ್ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ, ಸಿಬಲ್ ಕೋರ್ಟ್ ನೈಪುಣ್ಯತೆ ಅದ್ಭುತ ಎಂದು ಶ್ಲಾಘಿಸಿದ್ದಾರೆ.

'ಕಾಂಗ್ರೆಸ್‌ಅನ್ನು ಕಪಿಲ್ ಸಿಬಲ್ ತೊರೆದ ವಿಚಾರವನ್ನು ಕೇಳಿ ಸಂತೋಷವಾಯಿತು. ಸಿಬಲ್ ಅವರಿಗೆ ರಾಜ್ಯಸಭೆ ಆಯ್ಕೆಯಾಗುವುದು ಅಂತಹ ದೊಡ್ಡ ಸಂಗತಿಯೇನಲ್ಲ. ಅದರಿಂದ ನನ್ನ ಆತ್ಮೀಯ ಸ್ನೇಹಿತರಾದ ಮುಲಾಯಮ್ ಸಿಂಗ್ ಮತ್ತು ರಾಮಗೋಪಾಲ್ ಯಾದವ್ ಅವರಿಗೆ ನೆರವಾಗಲಿದೆ. ಇಬ್ಬರೂ ಅತ್ಯುತ್ತಮ ಮತ್ತು ನೈಜ ಮುಖಂಡರು' ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ರಾಷ್ಟ್ರದ ಹೆಸರಾಂತ ವಕೀಲರ ಪೈಕಿ ಕಪಿಲ್ ಸಿಬಲ್ ಒಬ್ಬರು. ಈ ಹಿನ್ನೆಲೆಯಲ್ಲಿ ಸಿಬಲ್ ಅವರು ಪಕ್ಷ ತೊರೆದಿದ್ದು ಕಾಂಗ್ರೆಸ್‌ಗೆ ದೊಡ್ಡ ನಷ್ಟ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಬಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಪ್ರತಿಷ್ಠಿತ ಪ್ರಕರಣಗಳನ್ನು ಪ್ರತಿನಿಧಿಸಿದ್ದಾರೆ.