ಲಖನೌ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಇನ್ನೊಂದು ಶಿವಲಿಂಗ ಅಸ್ತಿತ್ವದಲ್ಲಿದ್ದು, ಇದು ವಾರಾಣಸಿಯ ಕಾಶಿವಿಶ್ವನಾಥ ದೇವಾಲಯದ ಪಕ್ಕದಲ್ಲಿದೆ ಎಂದು ಕಾಶಿ ವಿಶ್ವನಾಥ ದೇವಾಲಯದ ಮಹಾಂತ (ಮುಖ್ಯ ಅರ್ಚಕ) ಕುಲಪತಿ ತಿವಾರಿ ಭಾನುವಾರ ಹೇಳಿದ್ದಾರೆ.

ಅಲ್ಲಿ ಪೂಜೆಗೆ ಅವಕಾಶ ನೀಡಬೇಕೆಂದು ಕೋರಿ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
'ಶಿವಲಿಂಗವನ್ನು ನಾನು ನೋಡಿದ್ದೇನೆ ಮತ್ತು ಅದಕ್ಕೆ ನನ್ನ ಬಳಿ ಪುರಾವೆಗಳಿವೆ ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುತ್ತೇನೆ' ಎಂದಿರುವ ಅವರು, 'ಈ ಶಿವಲಿಂಗವು ಸ್ವಯಂಭು ಆಗಿದ್ದು, ಅಲ್ಲಿ ನಾವು ಪೂಜೆ ಮಾಡಬೇಕು' ಎಂದೂ ಹೇಳಿದ್ದಾರೆ.
ಜ್ಞಾನವಾಪಿ ಮಸೀದಿಯ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎನ್ನಲಾದ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾ ನ್ಯಾಯಾಲಯ ಈಚೆಗೆ ಆದೇಶ ನೀಡಿತ್ತು.