ನವದೆಹಲಿ: ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ನವದೆಹಲಿ: ಸಂಸ್ಕೃತ ಭಾಷೆಯು ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
'ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ'ವು ಆಯೋಜಿಸಿದ 'ಉತ್ಕರ್ಷ್ ಮಹೋತ್ಸವ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಮ್ಮ ಪಕ್ಷವು ಪ್ರಾಚೀನ ಭಾಷೆಯನ್ನು ರಕ್ಷಿಸುತ್ತದೆ.
ಬಿಜೆಪಿ ಸಿದ್ಧಾಂತವು ಸಂಸ್ಕೃತದ ಜತೆಗಿದೆ. ಭಾರತೀಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಪಕ್ಷವು ಕೈಬಿಡುವುದಿಲ್ಲ ಎಂದು ನಡ್ಡಾ ಹೇಳಿದ್ದಾರೆ.
ವಿಜ್ಞಾನ, ಜ್ಞಾನ, ಗಣಿತ ಹಾಗೂ ತತ್ವಜ್ಞಾನದ ಮೂಲವು ಸಂಸ್ಕೃತದಲ್ಲಿ ಬೇರೂರಿದೆ ಎಂದೂ ಅವರು ಹೇಳಿದ್ದಾರೆ. ಭಾರತದ ಸಂಸ್ಕೃತಿಗೆ ಜಗತ್ತಿನಲ್ಲೇ ಸಾಟಿಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.