ಕಾಸರಗೋಡು: ಕೇರಳದ ಉತ್ತರಮಲಬರ್ ಪ್ರದೇಶದಲ್ಲಿ ಒಟ್ಟು ಹತ್ತು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ರೈಲ್ವೆ ಮಂಡಳಿಯು ಕೇರಳ ರೈಲ್ವೆ ಅಭಿವೃದ್ಧಿ ನಿಗಮಕ್ಕೆ ಅಂಗೀಕಾರ ನೀಡಿದೆ. ಕಾಸರಗೋಡು ಜಿಲ್ಲೆಯ ಮೂರು ಮತ್ತು ಕಣ್ಣೂರು ಜಿಲ್ಲೆಯ ಏಳು ಕೇಂದ್ರಗಳಲ್ಲಿ ಈ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ-ಉಪ್ಪಳ ನಡುವಿನ ಉಪ್ಪಳ ಗೇಟ್, ಪಯ್ಯನ್ನೂರು-ತೃಕ್ಕರಿಪುರ ರೈಲ್ವೆ ನಿಲ್ದಾಣ ನಡುವಿನ ಸೌತ್ ತೃಕ್ಕರಿಪುರ ಗೇಟ್, ಹಾಗೂ ಒಳವರ ಗೇಟ್ ಎಂಬ ಸ್ಥಳದಲ್ಲಿ ಮಲ್ಸೇತುವೆಗಳು ನಿರ್ಮಾಣಗೊಳ್ಳಲಿದೆ.