ತಿರುವನಂತಪುರಂ: ರಾಜ್ಯದಲ್ಲಿ ಹೆಚ್ಚಳಗೊಳಿಸಿರುವ ಬಸ್, ಆಟೋ, ಟ್ಯಾಕ್ಸಿ ದರಗಳು ಇಂದಿನಿಂದ ಜಾರಿಗೆ ಬರಲಿವೆ. ಆರ್ಡಿನರಿ ಬಸ್‌ಗಳ ಹೊಸ ದರವನ್ನು 2 ರಿಂದ 10 ರೂ. ಮತ್ತು ವೇಗದ ಬಸ್‌ಗಳಿಗೆ 1 ರಿಂದ 15 ರೂ ಹೆಚ್ಚಳಗೊಳ್ಳಲಿವೆ. ಈ ದರದಲ್ಲಿ ಎರಡೂವರೆ ಕಿಲೋಮೀಟರ್ ಪ್ರಯಾಣಿಸಬಹುದು. ಅದಕ್ಕಿಂತ ಹೆಚ್ಚಿನ ಒಂದೊಂದು ಕಿಲೋಮೀಟರ್ ಗೂ ಒಂದು ರೂ. ಶುಲ್ಕ ಹೆಚ್ಚಳವಾಗುವುದು.
ಸೂಪರ್‌ಫಾಸ್ಟ್‌ಗಳಲ್ಲಿ ಕನಿಷ್ಠ ದರವನ್ನು 20 ರಿಂದ 22 ರೂ.ಗೆ ಮತ್ತು ಕಿಲೋಮೀಟರ್ ದರವನ್ನು 98 ಪೈಸೆಯಿಂದ 1.08 ರೂ.ಗೆ ಹೆಚ್ಚಿಸಲಾಗಿದೆ.
ಆಟೋ ರಿಕ್ಷಾಗಳ ಕನಿಷ್ಠ ದರವನ್ನು 1.5 ಕಿ.ಮೀಗೆ 25 ರಿಂದ 30 ರೂ.ಗೆ ಹೆಚ್ಚಿಸಲಾಗಿದೆ. ಕನಿಷ್ಠ ಶುಲ್ಕಕ್ಕಿಂತ ಪ್ರತಿ ಕಿ.ಮೀ.ಗೆ 15 ರೂ.ಹೆಚ್ಚು ನೀಡಬೇಕಿದೆ. ಟ್ಯಾಕ್ಸಿಗೆ ಕನಿಷ್ಠ ದರ ರೂ. 200 ರೂ.ಆಗಲಿದೆ. ಅಲ್ಲದೆ ಪ್ರತಿ ಕಿ.ಮೀ.ಗೆ 18 ರೂ. ಹೆಚ್ಚಳವಾಗುವುದು. ಆದಾಗ್ಯೂ, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್, ಸೂಪರ್ ಏರ್ ಎಕ್ಸ್‌ಪ್ರೆಸ್, ಸೂಪರ್ ಡೀಲಕ್ಸ್, ಸೆಮಿ ಸ್ಲೀಪರ್, ಸಿಂಗಲ್ ಆಕ್ಸ್ ಸೇವೆಗಳು, ಮಲ್ಟಿ ಆಕ್ಸಲ್ ಸೇವೆಗಳು ಮತ್ತು ಲೋ ಫ್ಲೋರ್ ಎಸಿಗಳ ಕನಿಷ್ಠ ದರಗಳನ್ನು ಹೆಚ್ಚಿಸಲಾಗಿಲ್ಲ.