HEALTH TIPS

ರಾಜಸ್ಥಾನದಲ್ಲಿ ಮತ್ತೊಂದು ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಘೋಷಣೆ

           ನವದೆಹಲಿ: ರಾಜಸ್ಥಾನದ ರಾಮಗಡ ವಿಸ್ಧಾರ್ ಅಭಯಾರಣ್ಯವನ್ನು ಭಾರತದ 52 ನೇ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವನ್ನಾಗಿ ಘೋಷಣೆ ಮಾಡಲಾಗಿದೆ.

           ಸೋಮವಾರ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರು ಈ ಘೋಷಣೆ ಮಾಡಿದ್ದಾರೆ. ರಾಜಸ್ಥಾನದಲ್ಲಿನ ರಣತಂಬೂರ್, ಸಾರಿಸ್ಕಾ ಹಾಗೂ ಮುಕುಂಧರಾ ಹುಲಿ ಸಂರಕ್ಷಿತಾರಣ್ಯದ ನಂತರ ರಾಮಗಡ ವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ನಾಲ್ಕನೇಯದಾಗಿದೆ.

            ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ವನ್ಯಜೀವಿಗಳನ್ನು, ಪರಿಸರವನ್ನು ಹಾಗೂ ವನ್ಯಸಂಪತ್ತನ್ನು ಉಳಿಸಲು ಕಟಿಬದ್ಧವಾಗಿದ್ದು, ಈ ನಿಟ್ಟಿನಲ್ಲಿ ರಾಮಗಡ ವಿಸ್ಧಾರ್ ಹುಲಿ ಸಂರಕ್ಷಿತಾರಣ್ಯ ಮಹತ್ವದ ಪಾತ್ರ ವಹಿಸಲಿದೆ ಎಂದಿದ್ದಾರೆ.

              ರಾಮಗಡ ವಿಸ್ಧಾರ್ ಹುಲಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತಾರಣ್ಯವನ್ನಾಗಿ ಮಾಡಲು ಕೇಂದ್ರ ಸರ್ಕಾರಕ್ಕೆ ರಾಷ್ಟ್ರಿಯ ಹುಲಿ ಸಂರಕ್ಷಣಾ ಪ್ರಾಧಿಕಾರ ಕಳೆದ ವರ್ಷ ಜುಲೈ 5 ರಂದು ತಾತ್ವಿಕ ಒಪ್ಪಿಗೆ ಸೂಚಿಸಿತ್ತು.

              ಈ ನಿರ್ಧಾರದಿಂದ ಭೀಮ್ಲಾತ್ ಹಾಗೂ ರಾಮಗಡ ವಿಭಾಗದಲ್ಲಿ ಪರಿಸರ ಪ್ರವಾಸೋಧ್ಯಮ ಉತ್ತೇಜನಗೊಳ್ಳಲಿದೆ ಎಂದು ಭೂಪೇಂದ್ರ ಯಾದವ್ ತಿಳಿಸಿದ್ದಾರೆ. 2019 ರ ಹುಲಿ ಗಣತಿ ವರದಿ ಪ್ರಕಾರ ಭಾರತದಲ್ಲಿ 2,967 ಹುಲಿಗಳು ಇರುವುದು ಕಂಡು ಬಂದಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries