ಭಾರತದಲ್ಲಿ ಬಿಸಿಲಿನ ಧಗೆ ತುಂಬಾನೇ ಹೆಚ್ಚಾಗಿದೆ. ರಾಜಾಸ್ಥಾನ, ದಹಲಿ, ಉತ್ತರ ಪ್ರದೇಶದಲ್ಲಿ ಉಷ್ಣಾಂಶ 45 ಡಿಗ್ರಿC ತಲುಪಿದೆ. ಉಷ್ಣಾಂಶ 36-37 ಡಿಗ್ರಿC ಇರುವಾಗಲೇ ಸಹಿಸಲು ಕಷ್ಟ. ಅದೇ ಈಗ 45 ಡಿಗ್ರಿC ತಲುಪಿದೆ ಎಂದಾದರೆ ಅಲ್ಲಿ ಉಷ್ಣಾಂಶ ಎಷ್ಟು ಭೀಕರವಾಗಿದೆ ಎಂಬುವುದನ್ನು ನಮಗೆ ಊಹಿಸಲೇ ಅಸಾಧ್ಯವಾಗಿದೆ, ಆದರೆ ಅಲ್ಲಿಯವರು ಅನುಭವಿಸುತ್ತಿದ್ದಾರೆ.
ಮಾರ್ಚ್ ತಿಂಗಳಿನಿಂದಲೇ ಬಿಸಿಲಿನ ಉರಿ ಹೆಚ್ಚಾಗಲರಂಭಿಸಿತ್ತು, ಏಪ್ರಿಲ್ ಕೊನೆಯ ವಾರದಲ್ಲಿ ಉಷ್ಣಾಂಶ ತುಂಬಾ ಹೆಚ್ಚಿದೆ, ಮೇ ತಿಂಗಳಿನಲ್ಲಿ ಬಿಸಿಲಿನ ಧಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಹೀಟ್‌ವೇವ್ಎಂದರೇನು? ಉಷ್ಣಾಂಶ ಅಧಿಕವಾದಾಗ ಆ ಪ್ರದೇಶವನ್ನು ಹೀಟ್‌ವೇವ್ ಪ್ರದೇಶ ಎಂದು ಕರೆಯಲಾಗುವುದು. ಸಮತಟ್ಟಾದ ಪ್ರದೇಶದಲ್ಲು ಉಷ್ಣಾಂಶ 40 ಡಿಗ್ರಿ C ತಲುಪಿದಾಗ, ಕರಾವಳಿ ಭಾಗದಲ್ಲಿ 37 ಡಿಗ್ರಿ C, ಬೆಟ್ಟ ಪ್ರದೇಶಗಳಲ್ಲಿ ಉಷ್ಣಾಂಶ 30 ಡಿಗ್ರಿ C ತಲುಪಿದರೆ ಅದಕ್ಕೆ ಹೀಟ್‌ವೇವ್ ಎಂದು ಕರೆಯಲಾಗುವುದು, ಸಾಮಾನ್ಯ ಉಷ್ಣಾಂಶಗಿಂತ 4.5 ಡಿಗ್ರಿ C ಅಥವಾ 6.4 ಡಿಗ್ರಿ C ಹೆಚ್ಚಾದರೆ ಹೀಟ್‌ವೇವ್ ಎಂದು ಕರೆಯಲಾಗುವುದು. ಅದಕ್ಕಿಂತ ಹೆಚ್ಚು ಉಷ್ಣಾಂಶ ಹೆಚ್ಚಾದರೆ ಗಂಭೀರ ಬಿಸಿಗಾಳಿ ಎಂದು ಕರೆಯಲಾಗುವುದು.
ಹೀಟ್‌ವೇವ್ ಶರೀರದ ಮೇಲೆ ಪರಿಣಾಮವೇನು? ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಾಗ ಇದು ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದರೆ ನಿರ್ಲಕ್ಷ್ಯ ಮಾಡಿದರೆ ಅಪಾಯ ಉಂಟಾಗಬಹುದು. ದೇಹದಲ್ಲಿ ಉಷ್ಣಾಂಶ ಹೆಚ್ಚಾದರೆ ರಕ್ತದೊತ್ತಡ ಕಡಿಮೆಯಾಗಿದೆ. ಅಲ್ಲದೆ ಹೃದಯದ ಮೇಲೆ ಹೆಚ್ಚು ಒತ್ತಡ ಬೀರುತ್ತದೆ. ಕಡಿಮೆ ರಕ್ತದೊತ್ತಡ, ತಲೆಸುತ್ತು, ತಲೆನೋವು, ವಾಂತಿ ಈ ರೀತಿಯ ಸಮಸ್ಯೆ ಹೆಚ್ಚಾಗುವುದು. ಮೈ ತುಂಬಾ ಬೆವರುವುದರಿಂದ ದೇಹದಲ್ಲಿ ಉಪ್ಪಿನಂಶ ಕಡಿಮೆಯಾಗುವುದು, ನೀರಿನಂಶ ಕಡಿಮೆಯಾಗುವುದು. ಇದರಿಂದ ಸ್ನಾಯು ಸೆಳೆತ, ತಲೆಸುತ್ತು ಉಂಟಾಗುವುದು. ಹೃದಯಘಾತದ ಸಾಧ್ಯತೆ ಹೆಚ್ಚು.
ಸುರಕ್ಷತೆಗೆ ಏನು ಮಾಡಬೇಕು? * ತುಂಬಾ ನೀರು ಕುಡಿಯಿರಿ. * ಲೈಟ್ ಆಹಾರ ಸೇವಿಸಿ, ನೀರಿನಂಶ ಅಧಿಕವಿರುವ ಆಹಾರ ಸೇವಿಸಿ. * ಸಡಿಲವಾದ ಕಾಟನ್ ಉಡುಪು ಧರಿಸಿ. * ಬಿಸಿಲಿನಲ್ಲಿ ಓಡಾಡಬೇಡಿ. * ಈ ಸಮಯದಲ್ಲಿ ಅನಗ್ಯತ ಪ್ರಯಾಣ ಮಾಡಿ. * ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಕಂಡುಬಂದರೆ ಕೂಡಲೇ ವೈದರನ್ನು ಕಾಣಿ.