ನವದೆಹಲಿ: ಗ್ರಾಹಕರ ದೂರುಗಳಿಗೆ ತುರ್ತು ಸ್ಪಂದಿಸುವಂತೆ ಇ ಕಾಮರ್ಸ್ ಕ್ಷೇತ್ರದ ದೈತ್ಯ ಕಂಪನಿ ಅಮೆಜಾನ್ ಗೆ ಕೇಂದ್ರ ಸರ್ಕಾರ ಸೂಚಿಸಿದೆ.
ತನ್ನ ಗ್ರಾಹಕರ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿದ್ದು, ಈ ಬಗ್ಗೆ ಹಿಂದೆಯೂ ಕೇಂದ್ರ ಗ್ರಾಹಕ ವ್ವಹಾರಗಳ ಸಚಿವಾಲಯ, ಅಮೆಜಾನ್ ಇಂಡಿಯಾ ಕಂಪನಿಗೆ ಸೂಚನೆ ನೀಡಿತ್ತು ಎನ್ನಲಾಗಿದೆ. ಈಗ ಮತ್ತೊಮ್ಮೆ ಖಡಕ್ ಆಗಿ ಸೂಚನೆ ನೀಡಿದ್ದು, ದೂರು ಪರಿಹಾರ ಸೇರಿದಂತೆ ಗ್ರಾಹಕ ಸೇವೆಗಳನ್ನು ಸುಧಾರಿಸಬೇಕೆಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದೆ.
ಗ್ರಾಹಕರ ಹಕ್ಕುಗಳನ್ನು ರಕ್ಷಿಸಲಾಗಿದೆ. ಆನ್ ಲೈನ್‌ನಲ್ಲಿ ನಕಲಿ ಸರಕುಗಳು ಮಾರಾಟವಾಗುತ್ತಿಲ್ಲ ಎಂಬುದನ್ನು ಖಾತರಿಪಡಿಸಿಕೊಳ್ಳುವಂತೆ ಹೇಳಲಾಗಿದೆ. ಈ ದಿಶೆಯಲ್ಲಿ ದೂರುಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಂಪನಿಗೆ ಮರು ಸೂಚನೆ ನೀಡಲು ಸಚಿವಾಲಯ ಮುಂದಾಗಿದೆ. ಮೇ 4 ರಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ವರ್ಚುವಲ್ ಮೀಟಿಂಗ್‌ನಲ್ಲಿ ಅಮೆಜಾನ್‌ನ ಉನ್ನತ ಅಧಿಕಾರಿಗಳಿಂದ ಇದಕ್ಕೆ ಸಂಬಂಧಿಸಿದ ವಿವರಣೆಯನ್ನು ಕೇಳಿದೆ. ಗ್ರಾಹಕ ಸೇವೆಗಳನ್ನು ಸುಧಾರಿಸಲು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಸುಧಾರಿಸಲು ಕಟ್ಟುನಿಟ್ಟಾದ ಎಚ್ಚರಿಕೆಯನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿ ಗ್ರಾಹಕರ ರಕ್ಷಣೆ ಹಕ್ಕುಗಳನ್ನು ನಿರ್ವಹಿಸುವ ನೋಡಲ್ ಸರ್ಕಾರಿ ಇಲಾಖೆಯಾಗಿರುವ ಸಚಿವಾಲಯವು ಈ ಹಿಂದೆ ಇ-ಕಾಮರ್ಸ್ ಆಪರೇಟರ್‌ಗಳಿಗೆ ಎಚ್ಚರಿಕೆ ನೀಡಿದ್ದು, ದೇಶದಲ್ಲಿ ಗ್ರಾಹಕರ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಹೆಚ್ಚಿಸಲು ಕೇಳಿದೆ. ತಿಂಗಳ ಅಂತ್ಯದ ವೇಳೆಗೆ ನವೀಕರಿಸಿದ ಗ್ರಾಹಕ ಸೇವೆಗಳ ಉತ್ತಮ ಸ್ಥಿತಿಯನ್ನು ಮರಳಿ ಪಡೆಯಲು ಅಮೆಜಾನ್ ಇಂಡಿಯಾಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ” ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.