ಮಂಜೇಶ್ವರ: ಶೇಷವನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಕೂಡ್ಲು ದೇಗುಲದ ಪ್ರತಿಷ್ಠಾ ದಿನಾಚರಣೆಯ ಸಲುವಾಗಿ ಇತ್ತೀಚೆಗೆ ಜರಗಿದ ಅಷ್ಟಚತ್ವಾರಿಂಶತ್ ಆಶ್ಲೇಷಬಲಿ, ಲಕ್ಷಾರ್ಚನೆ ಸುಸಂದರ್ಭದಲ್ಲಿ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ "ತರಣಿಸೇನ ಕಾಳಗ" ಪ್ರಸ್ತುತಿ ಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಭಾಗವಹಿಸಿದ್ದು ಚೆಂಡೆ ಮದ್ದಳೆಯಲ್ಲಿ ಅಕ್ಷಯ ರಾವ್ ವಿಟ್ಲ, ವಿಕ್ರಂ ಮಯ್ಯ ಪೈವಳಿಕೆ, ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಪಾತ್ರಧಾರಿಗಳಾಗಿ ವೇ.ಮೂ. ಹರಿನಾರಾಯಣ ಮಯ್ಯ ಬಜೆ(ರಾವಣ), ರಾಜಾರಾಮ ರಾವ್ ಮೀಯಪದವು(ತರಣಿಸೇನ), ವೇ.ಮೂ. ಗಣೇಶ ನಾವಡ ಮೀಯಪದವು(ಸುಪಾಶ್ರ್ವಕ), ಯೋಗೀಶ ರಾವ್ ಚಿಗುರುಪಾದೆ(ಶ್ರೀರಾಮ), ಗುರುರಾಜ ಹೊಳ್ಳ ಬಾಯಾರು(ವಿಭೀಷಣ), ಗುರುಪ್ರಸಾದ ಹೊಳ್ಳ ತಿಂಬರ(ಸರಮೆ) ಭಾಗವಹಿಸಿ ಯಶಸ್ವಿಗೊಳಿಸಿದರು.