ಆಲಪ್ಪುಳ: ಪಾಪ್ಯುಲರ್ ಫ್ರಂಟ್ ರ್ಯಾಲಿಯಲ್ಲಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಮಗುವಿಗೆ ಸಂಬಂಧಿಸಿದ ಮಾಹಿತಿಯನ್ನು ಪೋಲೀಸರು ಕೊನೆಗೂ ಬಿಡುಗಡೆ ಮಾಡಿದ್ದಾರೆ. ಪೋಲೀಸರ ಪ್ರಕಾರ, ಮಗು ಎರ್ನಾಕುಳಂ ಜಿಲ್ಲೆಯ ತೋಪುಂಪಾಡಿ ಮೂಲದ್ದು. ಪೋಲೀಸರ ತಂಡ ಮಗುವನ್ನು ಹುಡುಕಿಕೊಂಡು ಮನೆಗೆ ತೆರಳಿದ್ದು, ಆದರೆ ಮನೆಗೆ ಬೀಗ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ದಿನಗಳ ತನಿಖೆಯ ಬಳಿಕ ಪೋಲೀಸರು ಬಾಲಕನನ್ನು ಪತ್ತೆ ಹಚ್ಚಿದ್ದಾರೆ. ಮಗುವನ್ನು ಗುರುತಿಸಿದರೂ ಪೋಲೀಸರು ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ವೇಳೆ ಮಗು ಇರುವ ಬಗ್ಗೆ ಮಾಹಿತಿ ನೀಡಲು ಕೊನೆಗೂ ಪೋಲೀಸರು ನಿರ್ಧರಿಸಿದ್ದಾರೆ. ತೃಕ್ಕಾಕರ ಉಪಚುನಾವಣೆ ಮುಗಿಯುವವರೆಗೆ ಮಗುವಿನ ವಿವರಗಳನ್ನು ಬಹಿರಂಗಪಡಿಸದಂತೆ ಪೋಲೀಸರಿಗೆ ಉನ್ನತ ಮಟ್ಟದ ನಿರ್ದೇಶನ ನೀಡಲಾಗಿತ್ತು.
ಮಗುವನ್ನು ಗುರುತಿಸಿದರೆ ಪೋಷಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಪೋಲೀಸರು ಈ ಹಿಂದೆ ಹೇಳಿದ್ದರು. ಇದರಿಂದ ಕುಟುಂಬಸ್ಥರು ಮನೆಯಿಂದ ಹೊರ ಹೋಗಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಅವರಿಗಾಗಿ ಪೋಲೀಸರು ತನಿಖೆ ಮುಂದುವರೆಸಿರುವ ಸೂಚನೆಗಳಿವೆ.
ಶನಿವಾರ ನಡೆದ ರ್ಯಾಲಿಯಲ್ಲಿ, ಮಗು ದ್ವೇಷವನ್ನು ಪ್ರಚೋದಿಸುವ ಘೋಷಣೆಗಳನ್ನು ಕೂಗಿತ್ತು. ಇದನ್ನು ರ್ಯಾಲಿಯಲ್ಲಿ ಭಾಗವಹಿಸಿದ್ದ ಇತರರು ಒಪ್ಪಿಕೊಂಡಿದ್ದಾರೆ. ಎರಟ್ಟುಪೆಟ್ಟಾ ಮೂಲದ ಅನ್ಸಾರ್ ನಜೀಬ್ ಎಂಬಾತ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದ. ಮತ್ತು ಸಂಘಟನೆಯ ಉಸ್ತುವಾರಿ ವಹಿಸಿದ್ದ ಪಾಪ್ಯುಲರ್ ಫ್ರಂಟ್ ಅಲಪ್ಪುಳ ಜಿಲ್ಲಾಧ್ಯಕ್ಷ ಪಿಎ ನವಾಸ್ ನನ್ನೂ ಪೋಲೀಸರು ಬಂಧಿಸಿದ್ದಾರೆ.