ವಾರಾಣಸಿ : ಬಿಗಿ ಭದ್ರತೆ ನಡುವೆ ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ಮತ್ತು ವಿಡಿಯೊ ಚಿತ್ರೀಕರಣ ಪ್ರಕ್ರಿಯೆ ಶನಿವಾರ ನಡೆದಿದ್ದು, ಭಾನುವಾರವೂ ಮುಂದುವರಿಯಲಿದೆ. ಮೊದಲ ದಿನ ಈ ಪ್ರಕ್ರಿಯೆಯು ಸುಗಮವಾಗಿ ನಡೆಯಿತು.
ವಾರಾಣಸಿ : ಬಿಗಿ ಭದ್ರತೆ ನಡುವೆ ಇಲ್ಲಿನ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷೆ ಮತ್ತು ವಿಡಿಯೊ ಚಿತ್ರೀಕರಣ ಪ್ರಕ್ರಿಯೆ ಶನಿವಾರ ನಡೆದಿದ್ದು, ಭಾನುವಾರವೂ ಮುಂದುವರಿಯಲಿದೆ. ಮೊದಲ ದಿನ ಈ ಪ್ರಕ್ರಿಯೆಯು ಸುಗಮವಾಗಿ ನಡೆಯಿತು.
'ಶಾಂತಿಯುತವಾಗಿ ಸಮೀಕ್ಷೆ ಪ್ರಕ್ರಿಯೆ ನಡೆಯಿತು. ಯಾರಿಂದಲೂ ಆಕ್ಷೇಪ ವ್ಯಕ್ತವಾಗಲಿಲ್ಲ. ಎಲ್ಲರೂ ಸಹಕರಿಸಿದರು' ಎಂದು ಪೊಲೀಸ್ ಕಮಿಷನರ್ ಎ.ಸತೀಶ್ ಗಣೇಶ್ ತಿಳಿಸಿದರು.
ಸಮೀಕ್ಷೆ, ವಿಡಿಯೊ ಚಿತ್ರೀಕರಣ ಕಾರ್ಯದಲ್ಲಿ ಸಿಬ್ಬಂದಿ, ಎಲ್ಲ ಭಾಗಿದಾರರು, ವಕೀಲರು, ಕೋರ್ಟ್ ಕಮಿಷನರ್ ಮತ್ತು ವಿಡಿಯೊಗ್ರಾಫರ್‌ಗಳು ಭಾಗವಹಿಸಿದ್ದರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದರು.
ಜ್ಞಾನವಾಪಿ ಮಸೀದಿಯು ಇಲ್ಲಿನ ಹೆಸರಾಂತ ಕಾಶಿ ವಿಶ್ವನಾಥ ದೇಗುಲಕ್ಕೆ ಹೊಂದಿಕೊಂಡಂತೇ ಇದೆ. ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಐವರು ಮಹಿಳೆಯರು ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಸಮೀಕ್ಷೆಗೆ ಆದೇಶಿಸಿದೆ.
ಮುಂಜಾಗ್ರತೆಯಾಗಿ 1500ಕ್ಕೂ ಅಧಿಕ ಪೊಲೀಸರು, ಭದ್ರತಾ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಸಮೀಕ್ಷೆಗೆ ಪೂರಕವಾಗಿ ವಿಶೇಷ ದೀಪ, ಕ್ಯಾಮೆರಾ ವ್ಯವಸ್ಥೆ ಮಾಡಲಾಗಿತ್ತು.